SUDDILIVE || SHIVAMOGGA
ಸಕ್ರಬೈಲಿನಲ್ಲಿ ಆನೆಗಳಿಗೆ ನಾಮಕರಣ-Naming ceremony at sakrebailu
ವಿಶ್ವ ಆನೆ ದಿನಾಚರಣೆ ಹಿನ್ನೆಲೆಯಲ್ಲಿ ಸಕ್ರೆಬೈಲಿನಲ್ಲಿ ಅದ್ಧೂರಿಯಾಗಿ ಎರಡು ಆನೆ ಮರಿಗಳಿಗೆ ನಾಮಕರಣ ಮಾಡಲಾಗಿದೆ. ತುಂಗಾ ಮತ್ತು ಚಾಮುಂಡಿ ಎಂದು ಎರಡು ಆನೆ ಮರಿಗಳಿಗೆ ಅಧಿಕಾರಿಗಳು ನಾಮಕರಣ ಮಾಡಿದ್ದಾರೆ.
ಸಕ್ರಬೈಲು ಆನೆಬಿಡಾರದಲ್ಲಿ ಜನಿಸಿದ ಎರಡು ಆನೆ ಮರಿಗಳಿಗೆ ಇಂದು ನಾಮಕರಣವನ್ನ ಮಾಡಲಾಯಿತು. ಅರಣ್ಯ ಇಲಾಖೆಯ ಸಿಸಿಎಫ್ ಹನುಮಂತಪ್ಪ ಹಾಗೂ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ನಾಮಕರಣ ಮಾಡಿದ್ದಾರೆ.
ಭಾನುಮತಿಯ ಮರಿಗೆ ಚಾಮುಂಡಿ, ನೇತವತಿ ಮರಿಗೆ ತುಂಗಾ ಎಂದು ಶಾಸ್ತ್ರಬದ್ದವಾಗಿ ನಾಮಕರಣ ಮಾಡಲಾಯಿತು. ಆನೆಯ ಕಿವಿಗೆ ಮೂರುಬಾರಿ ಚಾಮುಂಡಿ ಹಾಗೂ ತುಂಗಾ ಎಂದು ಹೇಳುವ ಮೂಲಕ ನಾಮಕರಣ ಮಾಡಲಾಯಿತು. ಸಕ್ರೆಬೈಲಿನಲ್ಲಿ ನಾಮಕರಣದ ವಾತಾವರಣವನ್ನ ಸೃಷ್ಠಿಸಿದೆ.
23 ಆನೆಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ದಸರಾ ಆನೆಗಳಂತೆ ಸಕ್ರೆಬೈಲಿನ ಆನೆಗಳು ಕಂಗೊಳಿಸುತ್ತಿವೆ. ಅರ್ಜುನ, ಸಾಗರ, ಬಹದ್ದೂರು, ಆನೆಗಳ ಸಾಲಿನಲ್ಲಿ ನಿಲ್ಲಿಸಿ ಕಾಡಾನೆ ತುಂಗಾ ಮತ್ತು ಚಾಮುಂಡಿಗೆ ನಾಮಕರಣ ಮಾಡಲಾಯಿತು. ಪುರೋಹಿತ ಮಧು ಭಟ್ಟರ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು.
Naming ceremony at sakrebailu