SUDDILIVE || BHADRAVATHI
ಕರಡಿ ದಾಳಿ-The bear attack
ತೋಟಕ್ಕೆ ನಡೆದುಕೊಂಡು ಹೋಗುವಾಗ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ಭದ್ರಾವತಿ ತಾಲೂಕು ಮಾವಿನಕೆರೆಯಲ್ಲಿ ನಡೆದಿದೆ.
ಬಂಡಿಗುಡ್ಡದ ಮಾವಿನಕೆರೆಯಲ್ಲಿ ಮಧುಸೂದನ್ (38) ಎಂಬುವರು ತೋಟಕ್ಕೆ ನಡೆದುಕೊಂಡು ಹೋಗುವಾಗ ಕರಡಿಯೊಂದು ದಾಳಿ ನಡೆಸಿದೆ. ಕರಡಿ ಕಚ್ಚಿರುವುದಾಗಿ ಹೇಳಲಾಗುತ್ತಿದೆ. ತಕ್ಷಣವೇ ಆತನನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧುಸೂದನ್ ಎದೆಗೆ ಕಚ್ಚಿರುವುದಾಗಿ ಹೇಳಲಾಗುತ್ತಿದೆ. ಭದ್ರಾವತಿಯ 9 ಕಿಮಿ ದೂರದಲ್ಲಿ ಮಾವಿನಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ 10-30 ಕ್ಕೆ ಘಟನೆ ನಡೆದಿದೆ.
The bear attack

