ad

ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದಂತೆ ಹಾಸನಕ್ಕೂ ವಿಪಕ್ಷಗಳು ಪಾದಯಾತ್ರೆ ನಡೆಸಲಿ-ಆಯನೂರು-Opposition parties should hold a padayatra in Hassan just like they did in Dharmasthala - Ayanur

 SUDDILIVE || SHIVAMOGGA

ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದಂತೆ ಹಾಸನಕ್ಕೂ ವಿಪಕ್ಷಗಳು ಪಾದಯಾತ್ರೆ ನಡೆಸಲಿ-ಆಯನೂರು-Opposition parties should hold a padayatra in Hassan just like they did in Dharmasthala - Ayanur

Dharmastala, Hasan

ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.  ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಸಂಕಷ್ಠಕ್ಕೆ ಧಾವಿಸಬೇಕು. ಇಂತಹ ಸಂದರ್ಭದಲ್ಲಿ ವಿಪಕ್ಷಗಳು ಅತ್ಯಂತ ಅಸಹ್ಯವಾಗಿ ನಡೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸರಿಯಾಗಿ ನಡೆದುಕೊಳ್ಳಲು ಬಿಡದೆ ವಿಪಕ್ಷಗಳು ಅತ್ಯಂತ ಬೇಜವಬ್ದಾರಿಯಿಂದ ನಡೆದುಕೊಂಡಿವೆ. ಬಜೆಟ್ ಸೆಷನಲ್ ನಲ್ಲಿಯೂ ಹೀಗೆ ನಡೆದಿದೆ. ರಾಜಣ್ಣನವರ ಹೇಳಿಕೆಯಿಂದ ಸದನದಲ್ಲಿ ವಿಪಕ್ಷಗಳ ಸದಸ್ಯರು ಅಮಾನತ್ತಾಗಿ ಹೊರಬಂದಿವೆ. 

ಬಡವರ, ಸಂತ್ರಸ್ತರ ಕಡೆ ನಡೆಯುವ ವಿಪಕ್ಷಗಳು ಬೇರೆಡೆ ಪಾದಯಾತ್ರೆಗೆ ಹೊರಟಿವೆ. ಧರ್ಮಸ್ಥಳದ ಕಡೆ ಪಾದಯಾತ್ರೆ ನಡೆಯುತ್ತಿವೆ. ಕಳೆದ 12-13 ವರ್ಷದಲ್ಲಿ ವಿಪಕ್ಷಗಳು ಅಧಿಕಾರಿದಲ್ಲಿದ್ದಾಗ ಧರ್ಮಸ್ಥಳದ ಬಗ್ಗೆ  ಕ್ರಮ ಕೈಗೊಳ್ಳಲಿಲ್ಲ. ನ್ಯಾಯಾಲಯದ ಆದೇಶದ ಮೇಲೆ ಧರ್ಮಸ್ಥಳದ ಹತ್ಯೆಯ ಕುರಿತು ಸರ್ಕಾರ ಎಸ್ಐಟಿ ರಚಿಸಿದಾಗ ಸ್ವಾಗತಿಸಿದ ವಿಪಕ್ಷಗಳು ಡಿಸಿಎಂ ಡಿಕೆಶಿ ಷಡ್ಯಂತರ ಎಂದು ಹೇಳಿದಾಗ  ಪಾದಯಾತ್ರೆಗೆ ಹೊರಟಿವೆ ಎಂದು ವ್ಯಂಗ್ಯವಾಡಿದರು.

ಧರ್ಮಸ್ಥಳಕ್ಕೆ ವ್ಯಾಪಕವಾಗಿ ಭಕ್ತರು ಬರ್ತಾಯಿದ್ದರೆ ಅದು ಸಿದ್ದರಾಮಯ್ಯನವರ ಶಕ್ತಿಯೋಜನರ ಕಾರಣವಾಗಿದೆ. ಧರ್ಮದ ಬಗ್ಗೆ ಕಾಳಜಿಯಿದ್ದಿದ್ದರೆ ಬಿಜೆಪಿ ಹಾಸನದ ಕಡೆ ಹೊರಡಬೇಕಿತ್ತು. ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನವರ ಹೆಸರು ಎತ್ತದ ಆಯನೂರು ಇವರ ವಿರುದ್ಧ ನ್ಯಾಯಾಲಯ ಅತ್ಯಾಚಾರದ ಆರೋಪಿ ಎಂದು ತೀರ್ಪುಕೊಟ್ಟಾಗ ಆ ಕಡೆ ಪಾದಯಾತ್ರೆಗೆ ಯಾಕೆ ಹೋಗಲಿಲ್ಲ. ಎರಡೂ ಪಕ್ಷದ ಎಳಸು ಚಹರೆಯಿಂದ ವಿಪಕ್ಷದ ಚಾರ್ಮ್ ಕಳೆದುಕೊಂಡಿವೆ ಎಂದು ದೂರಿದರು.

ಎಸ್ಐಟಿ ಅಂತಿಮವಾಗಿ ತೀರ್ಪು ಬರಲಿದೆ. ಧರ್ಮಸ್ಥಳ ದೋಷಮುಕ್ತರಾಗಿ ಹೊರಗೆ ಬರಲಿದೆ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ. ದಸರಾ ಉದ್ಘಾಟನೆಯಲ್ಲಿಯೂ ವಿವಾದವನ್ನ‌ ವಿಪಕ್ಷಗಳು ಹೊರಹಾಕಿವೆ. ಭಾನುಮುಷ್ತಾಕ್ ಉದ್ಘಾಟಿಸಿದಾಗ ವಿರೋಧ ವ್ಯಕ್ತಪಡಿಸುವ ಜೆಡಿಎಸ್ ಮತ್ತು ಬಿಜೆಪಿ ನಿಸಾರ್ ಅಹಮದ್ ಉದ್ಘಾಟನೆ ಮಾಡಿದಾಗ ವಿಪಕ್ಷಗಳು ಸುಮ್ಮನಿದ್ದಿದ್ದು ಹೇಗೆ. ಅರಸರು ದಸರಾದಲ್ಲಿ ಮಿರ್ಜಾಯಿ ಇಸ್ಮಾಯಿಲ್ ಅವರನ್ನ‌ ಕೂರಿಸಿಕೊಂಡು ದಸರಾ ಮೆರವಣಿಗೆ ನಡೆಸಿದ್ದಾರೆ ಈ ಬಗ್ಗೆ ಬಿಜೆಪಿ ಆಕ್ಷೇಪಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಆರೋಗ್ಯಕರ ಚರ್ಚೆಗಳು ಕನ್ನಡ ಸಾಹಿತ್ಯದಲ್ಲಿ ನಡೆದಿದೆ. ಭಾನುಮುಷ್ತಾಕ್ ಸಾಹಿತ್ಯ ಮೇಳದಲ್ಲಿ ಮಾತನಾಡಿದ್ದಕ್ಕೆ ಬಾಕಿಯವರಿಗೆ ಸಮಸ್ಯೆಯಾಗಿದೆ. ಕುವೆಂಪು, ಮತ್ತಿತರೆ ಸಾಹಿತ್ಯರು ದೇವರನ್ನ ವಿರೋಧಿಸುತ್ತಾರೆ ಅವರನ್ನ ನೀವು ಒಪ್ಪಲಿಲ್ಲವೇ. ಸಾಹಿತ್ಯ ಕ್ಷೇತ್ರದಲ್ಲಿ ನಡೆಯುವ ವಾದವಿವಾದಗಳ ಬಗ್ಗೆ ಅನಗತ್ಯ ವಿವಾದವನ್ನ ಸೃಷ್ಠಿಸದೆ ಜವಬ್ದಾರಿಯುತ ವಿಪಕ್ಷಗಳಾಗಿ ಕೆಲಸ ಮಾಡಬೇಕು. ಹಾಸನದಲ್ಲಿ ಅತ್ಯಾಚಾರವಾಗಿದೆ ಅಲ್ಲೂ ಪಾದಯಾತ್ರೆ ಮಾಡಿ. ಅವರು ಹಿಂದೂ ಸಂಸ್ಕೃತಿಯವರು ಅಲ್ವಾ ಎಂದು ಪ್ರಶ್ನಿಸಿದರು. 

ವಿಪಕ್ಷಗಳು ಇನ್ನಾದರೂ ಬದಲಾಗಬೇಕು. ಹಾಸನಕ್ಕೆ ಪಾದಯಾತ್ರೆ ಮತ್ತು ಭಾನು‌ಮುಷ್ತಾಕ್ ದಸರಾ ಉದ್ಘಾಟಿಸುವ ಬಗ್ಗೆ ಬಿಎಸ್ ವೈ ವಿಪಕ್ಷಗಳಿಗೆ ನಿರ್ದೇಶನ ನೀಡಬೇಕು. ಬಿಎಸ್ ವೈ ಅವರು ಏನಾದರೂ ಕೇಳಿದ್ದರೆ ರೈತರ ಪರ ಮಾತನಾಡುತ್ತಿದ್ದರು. ಆ ಪಕ್ಷದಲ್ಲಿ ಅವರನ್ನ ಮೂಲೆಗೆ ತಳ್ಳಿದಂತಿದೆ. ಪ್ರಬುದ್ಧತೆಯನ್ನ ವಿಪಕ್ಷಗಳು ಕಳೆದುಕೊಂಡಿವೆ ಎಂದ ಅವರು ಧರ್ಮದ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳಲು ವಿಪಕ್ಷಗಳು ಹೊರಟಿವೆ. ಖಾವಂದರರೆ ಎಸ್ಐಟಿ ಯನ್ನ ಸ್ವಾಗತಿಸಿದ್ದಾರೆ. ಆದರೆ ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ. ಈಗ ಪಾದಯಾತ್ರೆಗೆ ಹೊರಟಿರುವುದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂದರು. 

ಧರ್ಮಸ್ಥಳದ ವಿಷಯದಲ್ಲಿ ಕಳನಾಯಕರಂತೆ ಬಿಂಬಿಸುತ್ತಿದ್ದವರು ಯಾರು ಅವರು? ಧರ್ಮಸ್ಥಳದ ಬಗ್ಗೆ ಮಾತಬಾಡುವ ತಿಮರೋಡಿ, ಮಟ್ಟಣ್ಣನವರು ಕೈತುಂಬ ರಾಖಿ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅವರು ಯಾವ ಪಂಥೀಯರು ಎಂಬುದು ಸಹ ಹೊರಬೀಳಲಿದೆ. ಡಿಕೆಶಿಯ ಷಡ್ಯಂತರ ಹೇಳಿಕೆಯೂ ಸಹ ಬೆಳಕಿಗೆ ಬರುತ್ತದೆ. ಮಟ್ಟಣ್ಣ ಧರ್ಮಸ್ಥಳದಲ್ಲಿ ಮದುವೆಯಾಗುವ ಮದುಮಗಳು ಅವರೊಂದಿಗೆ ಮಲಗುತ್ತಾರೆ ಎಂದು ಹೇಳುತ್ತಾರೆ ಅವರು ಮಾನಸಿಕರಂತೆ ಕಂಗೊಳಿಸುತ್ತಿದ್ದಾರೆ. ಕೊನೆಹಂತಕ್ಕೆ ಈ ಧರ್ಮಸ್ಥಳ ಪ್ರಕರಣ ತಲುಪುತ್ತಿವೆ. ಎಲ್ಲವೂ ಬೆಳಕಿಗೆ ಬರುತ್ತದೆ ಎಂದರು. 

ಭಾನುಮುಷ್ತಾಕ್ ಅವರನ್ನ ಧರ್ಮದ ಪ್ರತಿನಿಧಿಯಾಗಿ ದಸರಾ ನಾಡಹಬ್ಬಕ್ಕೆ ಕರೆದಿಲ್ಲ. ಸಾಹಿತ್ಯದಲ್ಲಿ ಸಾಧನೆ ಮಾಡಿದವರೆಂದು ಗೌರವಿಸಿ ನಾಡಹಬ್ಬಕ್ಕೆ ಆಹ್ವಾನಿಸಲಾಗಿದೆ. ಕನ್ನಡ ಬಗ್ಗೆ ಮಾತನಾಡುವ ವಿಪಕ್ಷಗಳು ತಮ್ಮ ಕಚೇರಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಾರಾ? ಭಾನುಮುಷ್ತಾಕ್ ಅವರಿಗೆ ಅವರ  ಧರ್ಮದವರು ಪತ್ವಾ ಹೊರಡಿಸಿದರೆ ಅವರ ಧರ್ಮದ ಸಮಸ್ಯೆ ಅದು. ಅವರು ನಮ್ಮ ಧರ್ಮವನ್ನ ಒಪ್ಪೊಲ್ಲ ಎಂಬುದು ವಿಪಕ್ಷಗಳ ಆರೋಪ ಮಾಡೋದಾದರೆ ಕುವೆಂಪು ಅವರನ್ನ,  ಜಿಎಸ್ ಶಿವರುದ್ರಪ್ಪನವರು ಒಪ್ಪುತ್ತೀರಾ? ಅವರು ಸಹ ದೇವರನ್ನ‌ ಒಪ್ಪಿರಲಿಲ್ಲ. ಹಾಗಂತ ಅವರನ್ನ ಬಹಿಷ್ಕರಿಸುತ್ತೀರಾ ಎಂದು ಪ್ರಶ್ನಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಎಂ.ಶ್ರೀಕಾಂತ್, ರಮೇಶ್ ಶಂಕರ್ಟ್ಟ, ವೈಹೆಚ್ ನಾಗರಾಜ್ ಜಿಡಿ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

Opposition parties should hold a padayatra in Hassan just like they did in Dharmasthala - Ayanur

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close