ಶಶಿಧರ ಅವರನ್ನ ಲೋಕಾಯುಕ್ತರು ಹಿಡಿದಿರುವುದು ಸ್ವಾಗತಾರ್ಹ-It is welcome that the Lokayukta has arrested Shashidhara

SUDDILIVE || SHIVAMOGGA

ಶಶಿಧರ ಅವರನ್ನ ಲೋಕಾಯುಕ್ತರು ಹಿಡಿದಿರುವುದು ಸ್ವಾಗತಾರ್ಹ-It is welcome that the Lokayukta has arrested Shashidhara.

ಮಹಾನಗರ ಪಾಲಿಕೆಯಲ್ಲಿ  ಭ್ರಷ್ಟಾಚಾರ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ಮಹಾನಗರ ಪಾಲಿಕೆಯ ಚುನಾವಣೆಯನ್ನು ನಿಗದಿಪಡಿಸಬೇಕು ಎಂದು ಮಾಜಿ ಮಹಾನಗರ ಪಾಲಿಕೆ  ಸದಸ್ಯ ವಿಶ್ವಾಸ ಹೇಳಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ.  ಅದಕ್ಕೆ ನಿದರ್ಶನ ವೆಂಬಂತೆ ನಿನ್ನೆ ಒಬ್ಬ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಈ ಕುರಿತು ನಮ್ಮ ರಾಷ್ಟ್ರ ಭಕ್ತ ಬಳಗ ಈ ಹಿಂದೆ ಸಾಕಷ್ಟು ಹೋರಾಟವನ್ನು ಮಾಡಿದ್ದೆವು. ಆದರೂ ಸಹ ಯಾವುದೇ ಉಪಯೋಗವಾಗಲಿಲ್ಲ. 

ಆದ್ದರಿಂದ ಪಾಲಿಕೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಪಾಲಿಕೆಗೆ ತೆರಳಿ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆಸಬೇಕು. ಹಾಗೆಯೇ ಕಳೆದ 02 ವರ್ಷಗಳಿಂದ ಮಹಾನಗರ ಪಾಲಿಕೆಯ ಚುನಾವಣೆ ನಡೆದಿಲ್ಲ . ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಅದ್ರಿಂದ ಸರ್ಕಾರ  ಕೂಡಲೇ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಾಂಕ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು. 

ಅಷ್ಟೇ ಅಲ್ಲದೆ ಇ ಖಾತಾ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದ್ದು. ಬಡವರು ಪರಿತಪಿಸುವ ಪರಿಸ್ತಿತಿ ನಿರ್ಮಾಣವಾಗಿದೆ. ಇದೇನಾದರೂ ಹೀಗೆ ಮುಂದುವರೆದರೆ ಮುಂದೊಂದು ದಿನ ರಾಷ್ಟ್ರ ಭಕ್ತ ಬಳಗದ ವತಿಯಿಂದ ಮಹಾನಗರ ಪಾಲಿಕೆಯನ್ನು ಮುತ್ತಿಗೆ ಹಾಕಲಾಗುವುದು ಎಂದರು

 ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಎಚ್ಚರಿಕೆ ವಾಗೀಶ 

ಇದೇ ಸಂದರ್ಭದಲ್ಲಿ, ರಾಷ್ಟ್ರ ಭಕ್ತ ಬಳಗದ ವಾಗೀಶ್ ಅವರು ಪಾಲಿಕೆಯ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿರುವ ಮೈದಾನದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಹೈಕೋರ್ಟ್ 8 ವಾರಗಳ ಗಡುವು ನೀಡಿತ್ತು. ಆದರೆ, ಈ ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಾಗೀಶ್ ತಿಳಿಸಿದರು.

ಧರ್ಮಸ್ಥಳ ಪಾದಯಾತ್ರೆ

ಸೆ.2 ರಂದು ರಾಷ್ಟ್ರಭಕ್ತರ ಬಳಗದಿಂದ ಧರ್ಮಸ್ಥಳ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದು ಅಂದು ಬೆಳಿಗ್ಗೆ 8 ಗಂಟೆಗೆ ಮಾಜಿ ಡಿಸಿಎಂ ಈಶ್ವರಪ್ಪನವರ ಮಬೆಯಿಂದ 300 ವಾಹನದಲ್ಲಿ ಪಾದಯಾತ್ರೆ ನಡೆಯಲಿದೆ. ಧರ್ಮಸ್ಥಳದಲ್ಲಿ ದೇವರಿಗೆ ವಿಶಾಎಷ ಪೂಜೆ ನಡೆಸಿ ವಾಪಾಸ್ ಆಗುತ್ತಿದ್ದೇವೆ ಎಂದು ಪಕ್ಷದ ಜಿಪಿ ಶ್ರೀಕಾಂತ ತಿಳಿಸಿದರು. 

It is welcome that the Lokayukta has arrested Shashidhara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close