SUDDILIVE || SHIVAMOGGA
ಮನೆಗಳ್ಳತನದ ಆರೋಪಿ ಅರೆಸ್ಟ್-House burglary accused arrested
ಮನೆಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅನ್ಯ ಜಿಲ್ಲೆಯ ಆರೋಪಿಗಳನ್ನ ನಗರ ಪೊಲೀಸರು 48 ಗಂಟೆಯ ಒಳಗೆ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ.21 ರಂದು ನಗರ ಹೋಬಳಿಯ ನಿಲ್ಸ್ ಕಲ್ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿಸೋಜಾ ಬಿನ್ ಪೌಲ್ ಡಿಸೋಜಾ ರವರ ಹಾಗೂ ನಗರ ಹೋಬಳಿ ಮಾಸ್ತಿಕಟ್ಟೆಯ ನಿವಾಸಿ ಶೇಷಾದ್ರಿ ಬಿನ್ ರೊಕ್ಕಪ್ಪ ರವರುಗಳ ಮನೆಯ ಮುಂಬಾಗಿಲಿನ ಬೀಗ ಒಡೆದು
ರಿಚರ್ಡ್ ಡಿಸೋಜಾ ಮನೆಯ ಗಾಡ್ರೇಜ್ ನಲ್ಲಿರಿಸಿದ್ದ 31 ಗ್ರಾಂ ತೂಕದ 1,66,000/- ರೂ ಮೌಲ್ಯದ ಚಿನ್ನಾಭರಣ ಹಾಗೂ 70,000/- ನಗದು ಹಣವನ್ನು ಹಾಗೂ ಶೇಷಾದ್ರಿಯವರ ಮನೆಯ ಗಾಡ್ರೇಜ್ ನಲ್ಲಿರಿಸಿದ್ದ ಒಟ್ಟು 28 ಗ್ರಾಂ ತೂಕದ 1,11,000/- ರೂ ಮೌಲ್ಯದ ಚಿನ್ನಾಭರಣ ಹಾಗೂ 30,000/- ರೂ ನಗದು ಹಾಗೂ 3,000/- ರೂ ಮೌಲ್ಯದ ಬೆಳ್ಳಿ ಆಭರಣಗಳ ಕಳ್ಳತನವಾಗಿತ್ತು. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಎಸ್ಪಿ ಮಾನ್ಯ ಮಿಥುನ್ ಕುಮಾರ್ ಜಿ. ಕೆ. ಮತ್ತು ಅಡಿಷನಲ್ ಎಸ್ಪಿ ಕಾರಿಯಪ್ಪ ಎ ಜಿ, ಮತ್ತು ರಮೇಶ್ ಕುಮಾರ್ ಎಸ್, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಅರವಿಂದ ಎನ್ ಕಲಗುಜ್ಜಿ ಹಾಗೂ ಹೊಸನಗರ ಸಿಇಐ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ಆರೋಪಿ ಪತ್ತೆ ಮತ್ತು ದಸ್ತಗಿರಿ ಕಾರ್ಯ ನಡೆಸಲಾಗಿದೆ.
ಪತ್ತೆ ಕಾರ್ಯದಲ್ಲಿ ನಗರ ಪಿಎಸ್ಐ ಶಿವಾನಂದ ಕೋಳಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀ ಕುಮಾರ್ ಟಿ ಎ.ಎಸ್.ಐ, ಶೇಖ್ ಅಮೀರ್ ಜಾನ್ ಎ.ಎಸ್.ಐ ಶ್ರೀ ಕಿರಣ್ ಕುಮಾರ್ ಡಿ.ವೈ ಸಿ.ಹೆಚ್.ಸಿ-442, ಶ್ರೀ ವಿಶ್ವನಾಥ್ ಡಿ ಸಿ.ಹೆಚ್.ಸಿ-427, ಶ್ರೀ ಪ್ರವೀಣ್ ಕುಮಾರ್ ಬಿಎಸ್.ಹೆಚ್,ಸಿ-428 ಶ್ರೀ ಶಿವಕುಮಾರ ನಾಯ್ಕ ಸಿ.ಹೆಚ್.ಸಿ-459 (ಹೊಸನಗರಠಾಣೆ) ಶ್ರೀ ರವಿಚಂದ್ರ ಸಿಪಿಸಿ-1221, ಶ್ರೀ ಸುಜಯಕುಮಾರ್ ಎಂ ಸಿಪಿಸಿ-1758 ಶ್ರೀ ಪ್ರಜ್ವಲ್ ಡಿ.ಎಸ್ ಸಿಪಿಸಿ-1795, ಶ್ರೀ ಸಚಿನ್ ಸಿಪಿಸಿ-1835 ಚಾಲಕರಾದ ಶಶಿಧರ ಎನ್ ಎ.ಪಿ.ಸಿ-255, ಬೆರಳಚ್ಚು ವಿಭಾಗ ಶಿವಮೊಗ್ಗ ಹಾಗೂ ಜಿಲ್ಲಾ ಎ.ಎನ್.ಸಿ ಸಿಬ್ಬಂದಿಯವರ ತಾಂತ್ತಿಕ ಸಹಕಾರದೊಂದಿಗೆ ಕಳ್ಳತನ ನೆಡೆದ 48 ಗಂಟೆಗಳಲ್ಲಿ ಪತ್ತೆ ಮಾಡಿದ್ದಾರೆ.
ತನಿಖಾ ತಂಡವು ಆ.24 ರಂದು ಪ್ರಕರಣದಲ್ಲಿ ಅಂತರ್ ಜಿಲ್ಲಾ ಆರೋಪಿಗಳಾದ 01) ಹನುಮಂತ ತೊಳೆಯಪ್ಪ ಕುಂಚಿಕೊರವರ , 26 ವರ್ಷ, ಲಕ್ಷ್ಮೇಶ್ವರ ತಾಲೂಕು ಗದಗ ಜಿಲ್ಲೆ ಹಾಗೂ 02) ಮಂಜುನಾಥ ಬಿಸುಕಲ್ಲೊಡ್ಡರ, 36 ವರ್ಷ, ಲಕ್ಷ್ಮೇಶ್ವರ ತಾಲೂಕು ಗದಗ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಒಟ್ಟು 55 ಗ್ರಾಂ ತೂಕದ ಅಂದಾಜು 4,00,000 ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 70000/- ಸ್ವತ್ತನ್ನು ಕೃತ್ಯ ನೆಡೆದ 48 ಗಂಟೆ ಅವಧಿಯೊಳಗೆ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
House burglary accused arrested
