SUDDILIVE || SHIVAMOGGA
ಶಿವಮೊಗ್ಗದಲ್ಲಿ ಖಾಕಿ ಕಣ್ಗಾವಲು-Police surveillance in Shimoga
ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮತ್ತು ಮುಂಜಾಗ್ರತ ಕ್ರಮವಾಗಿ ಹಾಗೂ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸುವ ಸಂಬಂಧ ಪೊಲೀಸ್ ಇಲಾಖೆ ಎಲ್ಲರ ಚಲನ ವಲನದ ಮೇಲೆ ಕಣ್ಣಿಟ್ಟಿದೆ. ಯಾವುದೇ ಘಟನೆ ಜರುಗಿದರೆ ಕೂಡಲೇ ಪತ್ತೆ ಹಚ್ಚುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ 1000 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಸದರಿ ಸಿಸಿಟಿವಿ ಕ್ಯಾಮೆರಾ ಗಳನ್ನು ಈಗಾಗಲೇ ಸೂಕ್ಷ್ಮ ಸ್ಥಳಗಳು ಮತ್ತು ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ಅಳವಡಿಸಲಾಗಿರುತ್ತದೆ. ಸಿಸಿ ಟಿವಿ ಕ್ಯಾಮೆರಾ ಗಳು ಹೆಚ್ಚಿನ ದೂರದವರೆಗೆ ಸ್ಪಷ್ಟವಾದ ರೀತಿಯಲ್ಲಿ ಕವರೇಜ್ ಹೊಂದಿದ್ದು, ಸಣ್ಣ ಪುಟ್ಟ ಚಲನವಲನ ಹಾಗೂ ಚಟುವಟಿಕೆಯನ್ನು ಸಹ ರೆಕಾರ್ಡ್ ಮಾಡಿಕೊಳ್ಳುತ್ತದೆ. ಹಾಗೂ ಸದರಿ ಕ್ಯಾಮರಾಗಳು ಮೈಕ್ ಏನೇಬಲ್ಡ್ ವೈಶಿಷ್ಟ್ಯ ಹೊಂದಿದ್ದು ಅದರ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಬಹುದಾಗಿದೆ.
ಸಿ ಸಿ ಟಿವಿ ಕ್ಯಾಮೆರಾಗಳ ಫೂಟೇಜ್ ಅನ್ನು ಪೊಲೀಸ್ ಇಲಾಖೆಯು ಲೈವ್ ಸ್ಟ್ರೀಮಿಂಗ್ ಮುಖಾಂತರ ನೋಡಲಿದ್ದು, ಸದರಿ ಫೂಟೇಜ್ ಗಳನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೀಟ್ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಕಂಟ್ರೋಲ್ ರೂಂನಲ್ಲಿ ಯೂ ಸಹ ಮಾನಿಟರಿಂಗ್ ಮಾಡುತ್ತಾರೆ.
ಈ ಮೂಲಕ ಪೊಲೀಸ್ ಇಲಾಖೆಯು ಎಲ್ಲರ ಚಲನ ವಲನದ ಮೇಲೆ ಸೂಕ್ತ ನಿಗವಹಿಸಿದೆ.
Police surveillance in Shimoga