SUDDILIVE || SHIVAMOGGA
ಗೆಜ್ಜೇನಹಳ್ಳಿ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸಾವು-Bike accident at Gejjenahalli, One unknown person died
ಶಿವಮೊಗ್ಗ ಗೆಜ್ಜೇನಹಳ್ಳಿ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.
ಒಂದು ಬೈಕ್ ಶಿವಮೊಗ್ಗದ ಕಡೆ ಬರುತ್ತಿದ್ದರೆ ಮತ್ತೊಂದು ಬೈಕ್ ಹಾರನಹಳ್ಳಿ ಕಡೆ ಹೋಗುತ್ತಿತ್ತು. ಎರಡೂ ಬೈಕ್ ಮುಖಾಮುಖಿ ಡಿಕ್ಕಿಯಿಂದಾಗಿ ಓರ್ವನಿಗೆ ತಲೆಗೆ ಹೊಡೆತ ಬಿದ್ದಿದೆ. ಮತ್ತೋರ್ವನಿಗೆ ಗಾಯಗಳಾಗಿವೆ.
ತಲೆಗೆ ಹೊಡೆತ ಬಿದ್ದ ಯುವಕನನ್ನ 28 ವರ್ಷದ ಯುವಕನೆಂದು ಗುರುತಿಸಲಾದರೂ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಆತನನ್ನ ಮೆಗ್ಗಾನ್ ಗೆ ಕರೆತರುವ ಮೊದಲೇ ಸಾವಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.
Bike accident at Gejjenahalli
