ad

ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುವವರನ್ನ ಬಂಧಿಸುವಂತೆ ಎರಡು ಸಂಘಟನೆಯಿಂದ ಪ್ರತ್ಯೇಕ ಮನವಿ- Separate appeal from two organizations

SUDDILIVE || SHIVAMOGGA

ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುವವರನ್ನ ಬಂಧಿಸುವಂತೆ ಎರಡು ಸಂಘಟನೆಯಿಂದ ಪ್ರತ್ಯೇಕ ಮನವಿ-Separate appeal from two organizations to arrest those conspiring against Dharmasthala

Appeal, organization

ಹಿಂದೂ ಜನಜಾಗೃತಿ ವೇದಿಕೆ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮತ್ತು ಯುವಬ್ರಿಗೇಡ್  ವತಿಯಿಂದ ಧರ್ಮಸ್ಥಳದ ಬಗ್ಗೆ ಅವಹೇಳಕಾರಯಾಗಿ ಹೇಳುತ್ತಿರುವವರನ್ನ ಕೂಡಲೇ ಬಂಧಿಸುವಂತೆ ಪ್ರತಿಭಟನೆ ನಡೆಸಲಾಯಿತು. 

 ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮೂರು ಸಂಘಟನೆಗಳು ಧರ್ಮಸ್ಥಳವನ್ನ ಅವಹೇಳನ ಮಾಡುತ್ತಿರುವವರನ್ನ ಮತ್ತು ಷಡ್ಯಂತರ ಮಾಡುತ್ತಿರುವವರನ್ನ ಬಂಧಿಸಿ ಕಾನೂನು ಕ್ರಮ‌ಜರುಗಿಸಲು ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು. 

ಹಿಂದೂ ಜನಜಾಗೃತಿ ವೇದಿಕೆ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು  ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿಯ ಮೂಲಕ ಷಡ್ಯಂತರ ನಡೆಸಿ ಅಪಮಾನ ಮಾಡುತ್ತಿದ್ದಾರೆ ಇದನ್ನು ಖಂಡಿಸಿ ಮನವಿ ಸಲ್ಲಿಸಿದ್ದಾರೆ.

ಧರ್ಮಸ್ಥಳದ ಅಪಮಾನ ಮಾಡಿದವರ ಮೇಲೆ ವಿಶೇಷ ತನಿಖಾ ದಳದ ಮೂಲಕ ಸಂಪೂರ್ಣ ತನಿಖೆ ನಡೆಸಿ ಸತ್ಯ ಹೊರಬರುವಂತೆ ಮಾಡಬೇಕು. ಸುಳ್ಳು ಪ್ರಚಾರ ಹಾಗೂ ಧರ್ಮಸ್ಥಳದ ತೇಜೋವಧೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಿಂದೂ ಧಾರ್ಮಿಕ ಕೇಂದ್ರಗಳನ್ನ ಎಡಪಂಥೀಯ ಕಮ್ಯುನಿಸ್ಟ್ ಒತ್ತಡಗಳಿಂದ ಹಾಗೂ ಸುಳ್ಳು ಪ್ರಚಾರಗಳಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಯಿತು. 

ಈ ಪ್ರತಿಭಟನೆ ರಾಜ್ಯಕರೆಯಾಗಿದ್ದು, ಹಿಂದೂ ಜನಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕ ವಿಜಯ ರೇವಣಕರ್, ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಬಾಬು, ಜಿಲ್ಲಾ ಯುವ ಬ್ರಿಗೇಡ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಯುವ ಬ್ರಿಗೇಡ್ ನಿಂದ ಮನವಿ


ಯುವ ಬ್ರಿಗೇಡ್ ನ ರಾಜ್ಯ ಕಾರ್ಯದರ್ಶಿ, ಹರ್ಷ ಕುದುವಳ್ಳಿ, ನೇತೃತ್ವದಲ್ಲಿ, ಶಿವಮೊಗ್ಗ ನಗರ ವಾಸ ಇವರ ನೇತೃತ್ವದಲ್ಲಿ ಹತ್ತು ಜನರು ಸೇರಿ ಧರ್ಮಸ್ಥಳದ ಘನತೆಗೆ ಧಕ್ಕೆ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಎಸ್ಐಟಿ ತನಿಖೆ ನಡೆಸುತ್ತಿರುವ ಸಮಯದಲ್ಲೇ ಮಹೇಶ್ ಶೆಟ್ಟಿ ತಿಮರೋಡಿ ಗಿರೀಶ್ ಮಟ್ಟಣ್ಣನವರ್, ಸಮೀರ್ ಸಾಮಾಜಿಕ ಜಾಲತಾಣದ ಮೂಲಕ ಶ್ರೀ ಕ್ಷೇತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಿಂದೂ ವಿರೋಧಿ ಶಕ್ತಿಗಳು ಒಟ್ಟಾಗಿ ಸೇರಿ ಷಡ್ಯಂತರ ಪಿತೂರಿ ನಡೆಸುತ್ತಿವೆ ತಕ್ಷಣವೇ ಅವರನ್ನು ಬಂಧಿಸಬೇಕೆಂದು ಎಡಿಸಿ ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Separate appeal from two organizations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close