ad

ತಗ್ಗಿದ ತುಂಗೆ, ಭದ್ರಾವತಿಯಲ್ಲಿ ಮುಳುಗುವ ಸೇತುವೆ ಬಂದ್ ತುಂಬಿದ ಜಲಾಶಯಗಳು- The low tide of Tunga, the sinking bridge in Bhadravati, the dam filled with reservoirs

 SUDDILIVE || SHIVAMOGGA

ತಗ್ಗಿದ ತುಂಗೆ, ಭದ್ರಾವತಿಯಲ್ಲಿ ಮುಳುಗುವ ಸೇತುವೆ ಬಂದ್ ತುಂಬಿದ ಜಲಾಶಯಗಳು-The low tide of Tunga, the sinking bridge in Bhadravati, the dam filled with reservoirs


ಚಿಕ್ಕಮಗಳೂರು ಮತ್ತು ತೀರ್ಥಹಳ್ಳಿ ಭಾಗದಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ತುಂಗ ನದಿ ಮೈದುಂಬಿದೆ. ಪರಿಣಾಮ ನಗರದ ತಗ್ಗುಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮಯಕ್ ಅನೌನ್ಸ್ ಮೆಂಟ್ ಮಾಡಲಾಗುತ್ತಿದೆ. 


ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಹವಮಾನ ಇಲಾಖೆ ರೆಡ್ ಅಲರ್ಟ್ ನೀಡಿರುವ ಬೆನ್ನಲ್ಲೇ ತುಂಗ ನದಿ ಮೈದುಂಬಿ ಹರಿಯುತ್ತಿದ್ದಾಳೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದೆ. ನಿನ್ನೆ ಸಂಜೆ ತುಂಗ ನದಿಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಇಂದು ಬೆಳಿಗ್ಗೆ 75 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 


ಗಾಜನೂರಿನ ಜಲಾಶಯದಲ್ಲಿ 22 ಗೇಟು ತೆರೆದು ನೀರನ್ನ ಜಲಾಶಯಕ್ಕೆ ಬಿಡಾಗುತ್ತಿದೆ. ಪರಿಣಾಮ ನಗರದ  ದೊಡ್ಡ ಬ್ರಾಹ್ಮಣರ ಕೇರಿ, ಸೀಗೆಹಟ್ಟಿ, ಎಸ್ಪಿಎಂ ರಸ್ತೆ, ಮಂಡಕ್ಕಿ ಭಟ್ಟಿ, ಮಲವಗೊಪ್ಪ ದಕ್ಷಿಣ ಭಾಗಗಳಲ್ಲಿ ನಿನ್ನೆಯಿಂದಲೇ ತಗ್ಗು ಪ್ರದೇಶದ ಜನರು ಸುಕ್ಷಿತ ಸ್ಥಳಗಳಿಗೆ ತೆರಳುವಂತೆ ಮೈಕ್ ಅನೌನ್ಸ್ ಮೆಂಟ್ ಮಾಡಲಾಗಿದೆ. 


ಅದರಂತೆ ಭದ್ರ ನದಿಯಲ್ಲಿಯೂ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನಿನ್ನೆ 185.1 ಅಡಿ ನೀರು ಸಂಗ್ರಹವಾಗಿತ್ತು. 186 ಅಡಿಯ ಸಾಮರ್ಥ್ಯದ ಜಲಾಶಯದಲ್ಲಿ ಅಷ್ಟೇ ಪ್ರಮಾಣದ ನೀರನ್ನ ನದಿಗೆ ಬಿಡಲಾಗುತ್ತಿದೆ. ಭದ್ರಾವತಿಯ ಮುಳುಗುವ ಸೇತುವೆಯಲ್ಲಿ  ಸಧ್ಯಕ್ಕೆ ವಾಹನ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಭದ್ರ ಜಲಾಶಯದಲ್ಲಿ ಇದೇ ದಿನ 180 ಅಡಿ ನೀರು ಸಂಗ್ರಹವಾಗಿತ್ತು. 

ಲಿಂಗನಮಕ್ಕಿಯಲ್ಲಿ ಅಧಿಕ ಪ್ರಮಾಣ ನೀರು ಹರಿದುಬರುತ್ತಿದ್ದು, 1819 ಅಡಿ ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ನಿನ್ನೆಯ ವರೆಗೆ 1813 ಅಡಿ ನೀರು ಸಂಗ್ರಹವಾಗಿತ್ತು. ಇಂದು 1815 ಅಡಿ ನೀರು ಸಂಗ್ರಹವಾಗಿದೆ ಕಲೆದ ವರ್ಷ ಈ ದಿನ 1816 ಅಡಿ ನೀರು ಸಂಗ್ರಹವಾಗಿತ್ತು. ಇಂದು 59 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಬರಿದು ಬರುತ್ತಿದೆ. 

The low tide of Tunga, the sinking bridge in Bhadravati, the dam filled with reservoirs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close