ad

ಪೆಟ್ರೋಲ್ ತುಂಬಿಸಿಕೊಂಡು ಬರುವಾಗ ಐಬಿ ವೃತ್ತದಲ್ಲಿ ಅಪಘಾತ-ಎಂಬಿಬಿಎಸ್ ವಿದ್ಯಾರ್ಥಿಗಳಿಬ್ಬರು ಸಾವು- Two MBBS students die in accident at IB Circle

 SUDDILIVE || SHIVAMOGGA

ಪೆಟ್ರೋಲ್ ತುಂಬಿಸಿಕೊಂಡು ಬರುವಾಗ ಐಬಿ ವೃತ್ತದಲ್ಲಿ ಅಪಘಾತ-ಎಂಬಿಬಿಎಸ್ ವಿದ್ಯಾರ್ಥಿಗಳಿಬ್ಬರು ಸಾವು-Two MBBS students die in accident at IB Circle

MBBS, Student


ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂದಿನಿ  ವಾಹನಕ್ಕೆ ಸಾಗರ ರಸ್ತೆಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. 

ಮೃತಪಟ್ಟವರನ್ನ ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.  ಆದಿತ್ಯ(21) ಮತ್ತು ಸಂದೀಪ್‌(21) ಮೃತರಾಗಿದ್ದಾರೆ. ಈ ಘಟನೆ ಬೆಳಗ್ಗಿನ ಜಾವ 4-30 ಕ್ಕೆ ಸಂಭವಿಸಿದೆ. ಇದರಲ್ಲಿ ಒಬ್ಬರು ಸುರಹೊನ್ಬೆಯವರು ಮತ್ತೊಬ್ಬರು ಊಡುಪಿ ಜಿಲ್ಲೆಯರವು ಎನ್ನಲಾಗಿದೆ. 

  ಆದಿತ್ಯ                              ಸಂದೀಪ

ಭಾರ್ಗವಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ವಾಪಾಸ್ ಹಾಸ್ಟೆಲ್ ಗೆ ಬರುವಾಗ ಕುವೆಂಪುರಸ್ತೆಯ ಕಡೆ ಸಿಗ್ನಲ್ ಬಳಿ  ನಂದಿನಿ ಹಾಲಿನ ವಾಹನಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ.  ಆದಿತ್ಯ ಮತ್ತು ಸಂದೀಪ್‌ ಕೆಳಗೆ ಬಿದ್ದು ಗಾಯಗೊಂಡು, ತೀವ್ರ ರಕ್ತಸ್ರಾವ ಉಂಟಾಗಿದೆ. ರಸ್ತೆ ಮೇಲೆ ರಕ್ತ ಮಡುವಿನಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ.

ಇನ್ನು ಹಾಲಿನ ವಾಹನದಲ್ಲಿದ್ದ ಹಾಲಿನ ಕ್ರೇಟ್‌ಗಳೆಲ್ಲ ಕೆಳಗೆ ಬಿದ್ದು ಪ್ಯಾಕೆಟ್‌ಗಳು ಒಡೆದು ಹಾಲು ರಸ್ತೆಯ ಮೇಲೆ ಹರಿದಿದೆ. ‍ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಯುವಕರ ಮೃತದೇಹಗಳನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

Two MBBS students die in accident at IB Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close