ad

ಪಾಶ್ಚತ್ಯರು ಬಿಟ್ಟುಹೋದ ಪಾಪದ ಕೂಸೇ ಈ ಎಡಚರರು-ರತ್ನಕುಮಾರ್ ಜೈನ್- These leftists are the sins left behind by the West-Ratnakumar Jain

 SUDDILIVE || SHIVAMOGGA

ಪಾಶ್ಚತ್ಯರು ಬಿಟ್ಟುಹೋದ ಪಾಪದ ಕೂಸೇ ಈ ಎಡಚರರು-ರತ್ನಕುಮಾರ್ ಜೈನ್-These leftists are the sins left behind by the West-Ratnakumar Jain

Sins, leftist


ವಿಶ್ವಹಿಂದೂ ಪರಿಷತ್ ಬಜರಂಗದಳದ ಜಿಲ್ಲಾ ಘಟಕದ ವತಿಯಿಂದ ಓಂ ನಮಃ ಶಿವಾಯ ಅಭಿಯಾನ  ಮತ್ತು ಧರ್ಮ-ಧರ್ಮಸ್ಥಳ ಧರ್ಮಕ್ಷೇತ್ರಗಳ ರಕ್ಷಣೆ ನಮ್ಮ ಹೊಣೆ ಎಂಬ ಕಾರ್ಯಕ್ರಮ ನಡೆದಿದೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿವ ವಿದ್ಯಾಮಾನಗಳ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳುವಂತೆ ಕೋರಿದೆ. 

ರಾಜ್ಯಾದ್ಯಂತ ಒಂದುವಾರಗಳ ಕಾಲ ಶಿವನಾಮ ಭಜನೆ ಮತ್ತು ಕ್ಷೇತ್ರದ ಬಗ್ಗೆ ಹೆಚ್ಚಿನ ರಕ್ಷಣೆ ಮಾಡುವಂತೆ ತೀರ್ಮಾನಿಸಲಾಯಿತು. ಶಿವಮೊಗ್ಗದಿಂದ ಚಾಲನೆ ದೊರೆತಿದೆ. ಮುಖ್ಯ ಭಾಷಣ ಮಾಡಿದ ರತ್ನ ಕುಮರ್ ಜೈನ್ ಪಾಶ್ಚತ್ಯರು ಬಿತ್ತಿದ ಬೀಜವೇ ಎಡಚರರು ಎಂದರು.

ಪ್ರಜಾಪ್ರಭುತ್ವ ಬಂದರೂ ಯಾವುದೇ ಬದಲಾವಣೆಯಾಗಲಿಲ್ಲ.‌ ರಾಜಕೀಯ ವ್ಯವಸ್ಥೆಯಿಂದ ಜಾತಿ ಜಾತಿಗಳ ನಡುವೆ ಬಡಿದಾಡುವಂತಾಗಿದೆ. ಗವಿಸಿದ್ದೇಶ್ವರ ಮಠ, ಸಿದ್ದಲಿಂಗ ಮಠ, ಕೃಷ್ಣಮಠ ಸೇರಿದಂತೆ ಹಲವಾರು ಮಠಗಳು ನಮ್ಮ ಧರ್ಮವನ್ನ ಕಾಪಾಡಿಕೊಂಡು ಬರುತ್ತಿದೆ. ಇವೆಲ್ಲದರ ಮಠದ ಜೊತೆ ಧರ್ಮಾಸ್ಥಳ ಶ್ರೀಕ್ಷೇತ್ರ ಸಹ ಒಂದಾಗಿದೆ. 33 ಸಚಿವಾಲಯ ಮಾಡುವ ಕೆಲಸವನ್ನ ಧರ್ಮಾಧಿಕಾರಿಗಳು ಒಬ್ಬರೆ ನಡೆಸುತ್ತಿದ್ದಾರೆ ಎಂದರು. 

ನಾನು ಧರ್ಮಸ್ಥಳದಲ್ಲಿಯೇ ಓದಿದವನು. ಸಿದ್ದವನ ಗುರುಕುಲದಲ್ಲಿ ರತ್ನಮಾನಸ, ಸಿದ್ದರಾಜ ಎಂಬ ಹಾಸ್ಟೆಲ್ ಗಳಿವೆ. ಜಾತಿ ಧರ್ಮಗಳಿಲ್ಲದೆ ವಿದ್ಯಾರ್ಥಿಗಳಿಗೆ 400 ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅದರಲ್ಲಿ ಮುಸ್ಲೀಂರು ಶಿಕ್ಷಣ ಪಡೆದಿದ್ದಾರೆ. ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಯುತ್ತೆ. ಅಲ್ಲಿ ಲಕ್ಷಾಂತರ ಜನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆರೆ ಅಭಿವೃದ್ಧಿಯಂತಹ  ಶೈಕ್ಷಣಿಕ ಮತ್ತು ಸಾಮಾಜಿಕ ಕ್ಣೇತ್ರದಲ್ಲಿ ಕೆಲಸಮಾಡಿದ್ದಾರೆ. ಸಿಂಹಧಾಮದಲ್ಲಿ 10 ಕೆರೆಗಳನ್ನ ಅಭಿವೃದ್ಧಿ ಪಡಿಸಿ ಸರ್ಕಾರಕ್ಕೆ ಧರ್ಮಾಧಿಕಾತಿಗಳು ನೀಡಿದ್ದಾರೆ. ಅಂತಹ ಕ್ಷೇತ್ರಕ್ಕೆ ಕೆಟ್ಟು ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂದರು. 

1984 ರಲ್ಲಿ ಪದ್ಮಲತಾಳ ಎಂಬ ಮಹಿಳೆ ಕಾಣೆಯಾಗಿ 52 ದಿನಗಳ ನಂತರ ನೇತ್ರಾವತಿ ನದಿಯ ದಡದ ಮೇಲೆ ಮೃತ ದೇಹಸಿಕ್ಕಾಗ ಆಗಲೂ ಧರ್ಮಾಧಿಕಾರಿಗಳ ಮೇಲೆ ಆಪಾದನೆ ಬಂದಿತ್ತು.  ಸೌಜನ್ಯಳ ಹತ್ಯೆ ಪ್ರಕರಣದ ಮೇಲೂ ಧರ್ಮಾಧಿಕಾರಿಗಳ ಹೆಸರು ಎಳೆದು ತರಲಾಯಿತು. 12 ವರ್ಷದಿಂದ ಅನೇಕರು ಸೌಜನ್ಯಳ ಹತ್ಯೆ ಪ್ರಕರಣದಲ್ಲಿ ಲಾಭ ಮಾಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಇವೆಲ್ಲ ಆರೋಪಗಳು ನಿಲ್ಲಲಿಲ್ಲ ಎಂದರು. 

ತಿಮರೋಡಿ, ಭೀಮ, ಫೈನಾನ್ಸರ್ ಆಗಿದ್ದ ಸೋಮನಾಥ ನಾಯ್ಕ ಧರ್ಮಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದರು. ಧರ್ಮಸ್ಥಳದಲ್ಲಿ ಸಣ್ಣಪುಟ್ಟ ತಪ್ಪು ಮಾಡಿ ಸಿಕ್ಕಿಕೊಂಡವರು ಕೆಲಸ ಬಿಟ್ಟುಹೋದರು.  ಈಗ ಬುರುಡೆ ಪ್ರಕರಣವನ್ನ ಹೊರತಂದಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಜೈಲಿಗೆ ಹೋಗುವ ಸಾಧ್ಯತೆಯಿದೆ. ವ್ಯವಸ್ಥಿತವಾಗಿ ಪಿತೂರಿಯಿಂದ ಬರುತ್ತಿದ್ದಾರೆ. ಈ ಕೆಲಸ ಒಬ್ಬರ ಇಬ್ವರ ಕೈಯಲ್ಲಿ ಆಗೊಲ್ಲ ಅನೇಕರು ಸೇರಿ ನಡೆಸಿರುವ ಪಿತೂರಿಯಾಗಿದೆ. ನೆಕ್ಸ್ಟ್ ಆವರ ಟಾರ್ಗೆಟ್ ಉಡುಪಿ ಮತ್ತು ಶೃಂಗೇರಿಯಾಗಿದೆ ಎಂದರು. 

These leftists are the sins left behind by the West-Ratnakumar Jain

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close