ad

ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿ ಹಿನ್ನಲೆ-ಕೆಲ ರೈಲುಗಳು ರದ್ದು, ಭಾಗಶಃ ರದ್ದು ಹಾಗೂ ನಿಯಂತ್ರಣ- some trains cancelled, partially cancelled and restricted

SUDDILIVE || SHIVAMOGGA

ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿ ಹಿನ್ನಲೆ-ಕೆಲ ರೈಲುಗಳು ರದ್ದು, ಭಾಗಶಃ ರದ್ದು ಹಾಗೂ ನಿಯಂತ್ರಣ-Signaling and block instrument replacement work - some trains cancelled, partially cancelled and restricted

Penalty, train


ಆ. 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ.

ರದ್ದು

ಆಗಸ್ಟ್ 23ರಂದು, ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು–ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ. ಆಗಸ್ಟ್ 24ರಂದು: ಮೈಸೂರು–ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269), ಶಿವಮೊಗ್ಗ ಟೌನ್–ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226), ಮೈಸೂರು–ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (16225),  ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್ (56267), ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್ (56268), ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್ (56266) ಮತ್ತು ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್ (56265) ರೈಲುಗಳು ಒಂದು ದಿನ ರದ್ದುಗೊಳ್ಳಲಿವೆ.

ಭಾಗಶಃ ರದ್ದು: 

ಆಗಸ್ಟ್ 24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್–ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ಅದರ ನಿಗದಿತ ಸಮಯದಲ್ಲಿ ಪ್ರಯಾಣ ಆರಂಭಿಸಲಿದೆ.

ರೈಲುಗಳ ಪ್ರಯಾಣದಲ್ಲಿ ನಿಯಂತ್ರಣ 

ಆಗಸ್ಟ್ 24ರಂದು ಹೊರಡುವ ಈ ಕೆಳಗಿನ ರೈಲುಗಳ ಪ್ರಯಾಣದಲ್ಲಿ ನಿಯಂತ್ರಣವಿರುತ್ತದೆ. ರೈಲು ಸಂಖ್ಯೆ 16587 ಯಶವಂತಪುರ–ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ 18112 ಯಶವಂತಪುರ–ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್, 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಮತ್ತು 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಮಾರ್ಗಮಧ್ಯೆ 60–75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಮತ್ತು ರೈಲು ಸಂಖ್ಯೆ 17325 ಬೆಳಗಾವಿ–ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

some trains cancelled, partially cancelled and restricted

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close