ad

ಬಾವಿಗೆ ಬಿದ್ದು ಯುವಕ ಸಾವು - ಕಾಲು ಜಾರಿ ಬಿದ್ದಿರುವ ಶಂಕೆ- Young man dies after falling into well

SUDDILIVE || RIPPONPETE 

ಬಾವಿಗೆ ಬಿದ್ದು ಯುವಕ ಸಾವು - ಕಾಲು ಜಾರಿ ಬಿದ್ದಿರುವ ಶಂಕೆ-Young man dies after falling into well - suspected to have slipped

Falling, well

ಇಲ್ಲಿನ ನೆವಟೂರು ಗ್ರಾಮದ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿದ್ದು ಆತ್ಮಹತ್ಯೆಯೋ ಅಥವಾ ಕಾಲುಜಾರಿ ಬಿದ್ದಿದ್ದಾನೋ ಎಂಬ ಶಂಕೆ ವ್ಯಕ್ತವಾಗಿದೆ.

ನೆವಟೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ಮೃತ ಯುವಕನ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ , ನೆವಟೂರು ಗ್ರಾಮದ ಭರ್ಮಪ್ಪ ಎಂಬುವವರ ಪುತ್ರನಾದ ಆನಂದ್ ಇಂದು ಬೆಳಿಗ್ಗೆಯಿಂದ ಮನೆಯಲ್ಲಿ ಕಾಣದೇ ಇದ್ದ ಕಾರಣ ಹುಡುಕಾಟ ನಡೆಸಲಾಗಿದೆ ಈ ಸಂಧರ್ಭದಲ್ಲಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಾಗಿದೆ.

Young man dies after falling into well

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close