SUDDILIVE || SHIVAMOGGA
ಲಿಂಗಾಯಿತರೆಂದರೆ ಯಾರು-ನಿಜಗುಣಾನಂದ ಶ್ರೀಗಳು ಹೇಳಿದ್ದೇನು?Who are Lingayats - what did Nijagunananda Sri said?
ಲಿಂಗಾಯಿತ ಎಂದರೆ ಮಾನವ ಹಕ್ಕುಗಳ ಪ್ರತಿಪಾದನೆಯ ವ್ಯಕ್ತಿ ಯಾಗಿದೆ ಎಂದು ಮುಂಡರಗಿಯ ತೋಂಟದಾರ್ಯ ಸ್ವಾಮೀಜಿಗಳಾದ ಶರಣ ನಿಜಗುಣಾನಂದ ಶ್ರೀಗಳು ತಿಳಿಸಿದ್ದಾರೆ
ಇಂದು ಕೃಷಿ ನಗರದಲ್ಲಿ ಇರುವ ಶಿವಕುಮಾರ ಸ್ವಾಮಿಗಳ ನೌಕರರ ಸಂಘದ ಸಮರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಆಯಾ ರಾಜ್ಯಗಳು ಭಕ್ತಿ ಪರಂಪರೆಯನ್ನು ಹೊಂದಿದೆ ಆದರೆ ಕರ್ನಾಟಕ ಮಾತ್ರ ವಿಭಿನ್ನವಾದ ಭಕ್ತಿ ಪರಂಪರೆಯನ್ನು ಹೊಂದಿದೆ ಹಂಗಾಗಿ ಇದನ್ನು ಸಂಕ್ಷಿಪ್ತ ಕರ್ನಾಟಕ ಎಂದು ಕರೆಯಲಾಗುತ್ತದೆ ಎಂದರು.
12ನೇ ಶತಮಾನದಲ್ಲಿ ಅಂದರೆ ಪ್ರಭು ಪರಂಪರೆಯ ಶತಮಾನದಲ್ಲಿ ಪ್ರಜಾಪ್ರಭುತ್ವವನ್ನು ಕಂಡ ರಾಜ್ಯ ಯಾವುದು ಎಂದರೆ ಕರ್ನಾಟಕ ಒಂದೇ ಎಂದು ತಿಳಿಸಿದವರು ಲಿಂಗಾಯಿತ ಎನ್ನುವುದು ಜಾತಿಗೆ ಸೀಮಿತವಲ್ಲ ಕೆಲವರಿಗೆ ಈ ತಪ್ಪು ಕಲ್ಪನೆ ಇದೆ ಲಿಂಗಾಯಿತ ಎನ್ನುವುದು ಮಾನವ ಹಕ್ಕುಗಳ ಪ್ರತಿಪಾದನೆ ಎಂದರು.
ಲಿಂಗಾಯಿತರು ಎಂದರೆ ಯಾರು? ಗುಡಿಕಟ್ಟುದ್ರಾ ಛತ್ರ ಕಟ್ಟುದ್ರಾ ಬೀದರ್ ನಿಂದ ಮೈಸೂರಿನವರೆಗೆ ಈ ನಾಡಿನಲ್ಲಿ ಮೊಟ್ಟಮೊದಲಿಗೆ ಪ್ರಸಾದ ನೆಲೆಯನ್ನು ತೆಗೆದು ಶಿಕ್ಷಣವನ್ನು ನೀಡಿದ ಸಮುದಾಯವಾಗಿದೆ. ಲಿಂಗಾಯತರು ಎಂದರೆ ಯಾರು ಅಂಬೇಡ್ಕರ್ ಅವರನ್ನು ಶಿಕ್ಷಕರನ್ನಾಗಿ ಮಾಡಿದ ಸಮುದಾಯ ಲಿಂಗಾಯತ ಸಮುದಾಯವಾಗಿದೆ. ಮನುಷ್ಯತ್ವ ನೆಲಯವನ್ನು ಕಟ್ಟಿದವರು ಲಿಂಗಾಯಿತರು ಎಂದರು.
ಆಯನೂರು ಮಾತು
ಇಂದು ಬೇಡ ಬೇಡ ಎಂದರೂ ಬಸವಣ್ಣನ ಹೆಸರಲ್ಲಿ ಉಪಜಾತಿಗಳನ್ನು ಮಾಡಿಕೊಂಡು ವಿಜೃಂಭಿಸುತ್ತಿದ್ದೇವೆ. ಗುರುಗಳು ಕೂಡ ಅದೇ ರೀತಿ ಆಗಿದ್ದಾರೆ. ಯಾವುದೇ ಕಾರಣಕ್ಕೂ ಉಪ ಪಂಗಡಗಳು ವಿಜೃಂಭಿಸಬಾರದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಗುಡುಗಿದ್ದಾರೆ.
ಉಪ ಜಾತಿ ಮಾಡಿದರೆ ಸಮಾಜಕ್ಕೆ ದ್ರೋಹ ಮಾಡಿದಂತೆ ಆಂದೋಲನದಂತಿದ್ದ ಶರಣರನ್ನು ದಂಡನೆಗೆ ಒಳಪಡಿಸಿದ್ದರು. ಉಪಜಾತಿ ಮಾತನಾಡಿದ್ದರೆ ಬಸವತತ್ವದ ವಿರೋಧಿಗಳಾಗಿ ಗುರುತಿಸಿಕೊಂಡಂತೆ ಆಗಲಿದೆ. ಉಪ ಜಾತಿಗಳನ್ನು ಪೋಷಿಸುವುದು ಸರಿಯಲ್ಲ. ಜನಗಣತಿ ಸಂದರ್ಭದಲ್ಲಿ ೨ಎ ಉಪ ಜಾತಿ ಎಂದು ಬರೆಸುವ ಆತ್ಮವಂಚನೆಗೆ ತೀಲಾಂಜಲಿ ಇಡಬೇಕಿದೆ ಎಂದು ಕತೆ ನೀಡಿದರು.
ಯಡಿಯೂರಪ್ಪ ಅವರಂತೆ ಜಾತಿ ಮೀರಿ ಬೆಳೆಯಬೇಕಿದೆ ವಸತಿ ನಿಲಯಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಟ್ಟಿರುವುದು ಅತ್ಯಂತ ಖುಷಿಯಾಗಿದೆ. ಅವರು ಇಡೀ ವೀರಶೈವ ಲಿಂಗಾಯತ ಸಮಾಜದ ನೈಜ ಪ್ರತಿನಿಧಿಯಾಗಿದ್ದಾರೆ. ಮಾಜಿ ಸಿಎಂಗಳಾದ ವೀರೇಂದ್ರ ಪಾಟೀಲ್ ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಾಟೀಲ್ ಅವರಿಗೆ ಸಿಗದ ಗೌರವ ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಎಲ್ಲ ಮಠಾಧೀಶರ ಆಶೀರ್ವಾದ ಪಡೆದ ಸಮಾಜದ ನೈಜ ನಾಯಕ ಹೆಸರಿಟ್ಟಿರುವುದು ಖುಷಿಯ ವಿಚಾರ ಎಂದರು.
Who are Lingayats