SUDDILIVE || SHIVAMOGGA
ಪತ್ರಿಕಯಲ್ಲಿ ಸಂಸದರಿಗೆ ಜಾಹೀರಾತು ಮೂಲಕ ವಿಶಸ್! ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗುತ್ತಾ?Wishes to MPs through advertisements in newspapers! Will action be taken against government officials?
ಹುಟ್ಟುಹಬ್ಬದ ಶುಭಾಶಯಗಳನ್ನ ಅಧಿಕಾರಿಗಳು ಹೇಳುವುದು ಸರ್ವೆಸಾಮಾನ್ಯವಾಗಿದೆ. ಆದರೆ ಅಧಿಕಾರಿಗಳು ಜಾಹೀರಾತು ನೀಡಿರುವುದು ಎಲ್ಲಾದರೂ ನೋಡಿದ್ದೀರಾ? ಅದೇ ಸುದ್ದಿ...
ಶಿವಮೊಗ್ಗ ಸಂಸದರ ಹುಟ್ಟುಹಬ್ಬಕ್ಕೆ ಇಂದು ಸಂಸದರ ಶಿವಮೊಗ್ಗದ ನಿವಾಸಕ್ಕೆ ಎಲ್ಲಾ ಪಕ್ಷದವರು ಇಂದು ಬಂದಿದ್ದಾರೆ. ನಿವೃತ್ತ ಅಧಿಜಾರಿಗಳು ಬಂದು ವಿಶ್ ಮಾಡಿಹೋಗಿದ್ದಾರೆ. ಆದರೆ ಶಿಕಾರಿಪುರದ ಸರ್ಕಾರಿ ಅಧಿಕಾರಿಗಳು ಸಂಸದರಿಗೆ ವಿಶ್ ಮಾಡಿರುವುದನ್ನ ಒಂದು ಪಕ್ಷ ಆಕ್ಷೇಪಿಸಿದೆ.
ಶಿವಮೊಗ್ಗ ಕೆಆರ್ ಎಸ್ ಪಕ್ಷ ತನ್ನ ಫೇಸ್ ಬುಕ್ ನಲ್ಲಿ ಪಂಚಾಯತ್ ರಾಜ್ ಇನಿನಿಯರಿಂಗ್, ಕರ್ನಾಟಕ ನೀರಾವರಿ ನಿಗಮ, ಹಿಂದುವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಸಾಮೂಹಿಕವಾಗಿ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿರುವುದನ್ನ ಆಕ್ಷೇಪಿಸಿ ಶಿಸ್ತುಕ್ರಮ ಜರುಗಿಸಲು ಮುಂದಾಗಿದೆ.
ರಾಜ್ಯದ ಭ್ರಷ್ಟ ಅಧಿಕಾರಿಗಳು ಎಷ್ಟು ಕೊಬ್ಬಿದ್ದಾರೆ ಎನ್ನುವುದನ್ನು ಕೆಳಗೆ ಲಗತ್ತಿಸಿರುವ ಜಾಹೀರಾತು ತೋರಿಸುತ್ತದೆ. ಇದು ಇಂದಿನ ಶಿವಮೊಗ್ಗ ಜಿಲ್ಲೆಯ ಪ್ರಜಾವಾಣಿ ಆವೃತ್ತಿಯಲ್ಲಿ ಶಿಕಾರಿಪುರದ ಪಂಚಾಯತ್ ರಾಜ್ ಇನಿನಿಯರಿಂಗ್, ಕರ್ನಾಟಕ ನೀರಾವರಿ ನಿಗಮ, ಹಿಂದುವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಸಾಮೂಹಿಕವಾಗಿ ಒಬ್ಬ ಜನಪ್ರತಿನಿಧಿಯ ಹಾಗೂ ರಾಜಕೀಯ ಪಕ್ಷದ ನಾಯಕರ ಚಿತ್ರ ಹಾಕಿ ಜಾಹೀರಾತು ನೀಡುವುದು ಯಾವ ಮಟ್ಟದಲ್ಲಿ ದುರಾಡಳಿತ ನಡೆಯುತ್ತಿದೆ ಎಂದು ಗಮನಿಸಬೇಕು. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿ ಶಿಸ್ತು ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಆಗ್ರಹಿಸಿದೆ.
Wishes to MPs through advertisements in newspapers!