SUDDILIVE || SAGARA
ಓಮ್ನಿ ಕಾರು ಹಾಗೂ ಪಿಕಪ್ ವಾಹನ ನಡುವೆ ಅಪಘಾತ -ಓರ್ವ ವ್ಯಕ್ತಿ ಸಾವು-One person dies in accident between Omni car and pickup truck
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬಾಳೆಗಾರು ಸಮೀಪ ಓಮ್ನಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟರುವ ಘಟನೆ ಶನಿವಾರ ಸಂಜೆ ನಡೆದಿದೆ.
ಎನ್ ಆರ್ ಪುರದ ನಿವಾಸಿಗಳು ಜೋಗ ಜಲಪಾತ ವೀಕ್ಷಣೆ ಮಾಡಿದ ನಂತರ ವಾಪಸ್ ಬರುವ ಸಂದರ್ಭದಲ್ಲಿ ಸಾಗರದಿಂದ ಬರುತ್ತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿಯಲ್ಲಿ ಇದ ಪ್ರಯಾಣಿಕರಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ಪೇಷಂಟ್ ರಿಲೀಫ್ ತಂಡದ ಸದಸ್ಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದರು .
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಗಲ್ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ತಕ್ಷಣ ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳನ್ನು ಚಿಕಿತ್ಸೆ ನೀಡಲು ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದ ನಂತರ ಸಾಗರ ದಿಂದ ಶಿವಮೊಗ್ಗಕ್ಕೆ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಜೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ಹೋಗಲು ಸಹಕರಿಸುವ ಮೂಲಕ ಮಾನವೀಯತೆ ಮೆರೆದರು.
ಅಪಘಾತದಲ್ಲಿ 56 ವರ್ಷದ ಶೇಖರ್ ಎಂಬವರು ಮೃತಪಟ್ಟರೆ , 35 ವರ್ಷದ ಮಧುರ, 57 ವರ್ಷದ ಕಮಲ, 32 ವರ್ಷದ ಮಾನಸ, 49 ವರ್ಷದ ಸಿರಿಜ, 26 ವರ್ಷದ ಭಾವನಾ, ಎರಡು ವರ್ಷದ ಪುಟ್ಟ ಬಾಲಕ, ಹಾಗೂ 30 ವರ್ಷದ ಸಂಚಿತ್ ರಾಜ್ ರವರಿಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಒಟ್ಟಾರೆ ಸಾಗರ ತಾಲೂಕಿನಲ್ಲಿ ಇಂದು ಎರಡು ಘಟನೆ ನಡೆದಿದ್ದು ಆದಿಶಕ್ತಿ ನಗರದ ಸಿಲೆಂಡರ್ ಸ್ಫೋಟ ಹಾಗೂ ಬಾಳೆಗಾರು ಸಮೀಪ ಅಪಘಾತವಾಗಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು. ಈ ವೇಳೆ 30 ವರ್ಷದ ಸಂಚಿತ್ ರಾಜ್ ರವರಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವ ಕಾರಣದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸಿಲಿಂಡರ್ ಸ್ಪೋಟದ ಗಾಯಾಳುಗಳ ವಿಚಾರಣೆ
ಸಿಲೆಂಡರ್ ಸ್ಪೋಟದಿಂದ ಗಾಯಗೊಂಡಿರುವ ಕಿರಣ್ ಕುಮಾರ್ ರವರೆಗಳ ಆರೋಗ್ಯವನ್ನೂ ಸಹ ಈ ವೇಳೆ ಶಾಸಕರು ವಿಚಾರಿಸಿದ್ದಾರೆ. ಆದಿಶಕ್ತಿ ನಗರದಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಈ ವೇಳೆ ಗಾಯಾಳು ವೆಂಕಟೇಶ್ ಕುಟುಂಬದವರ ಆರೋಗ್ಯ ವಿಚಾರಿಸಿದ್ದಾರೆ.