ad

ಆ.13 ರಂದು ಬಹರಾಷ್ಟ್ರೀಯ ಮತ್ತು ಕಾರ್ಪರೇಟ್ ಕಂಪನಿಗಳೆ ದೇಶ ಬಿಟ್ಟು ತೊಲಗಿ ಪ್ರತಿಭಟನೆ- foreign and corporate companies left the country in protest.

 SUDDILIVE || SHIVAMOGGA

ಆ.13 ರಂದು ಬಹರಾಷ್ಟ್ರೀಯ ಮತ್ತು ಕಾರ್ಪರೇಟ್ ಕಂಪನಿಗಳೆ ದೇಶ ಬಿಟ್ಟು ತೊಲಗಿ ಪ್ರತಿಭಟನೆ-On August 13, foreign and corporate companies left the country in protest.



ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಗಳು ಬಹುರಾಷ್ಟ್ರೀಯ ಕಂಪನಿಗಳೆ ದೇಶ ಬಿಟ್ಟು ತೊಲಗಿ ಮತ್ತು ಕಾರ್ಪರೇಟ್ ಕಂಪನಿಗಳೆ ದೇಶ ಬಿಟ್ಟು ತೊಲಗಿ ಎಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಎಲ್ ಅಶೋಕ್, ಆ.13 ರಂದು ಈ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗಿದೆ. ಉದಾರೀಕರಣ, ಖಾಸಗಿಕರಣ ನೀತಿಗಳು ರೈತರ ಕಾರ್ಮಿಕ ದಲಿತರ ಮಹಿಖೆಯರ ಮತ್ತು ವಿದ್ಯಾರ್ಥಿಯುವ ಜನರ ಬದುಕಿಗೆ ವಿನಾಶಕಾರಿಯಾಗಿವೆ ಎಂದು ತಿಳಿಸಿದರು. 

ಅಮೇರಿಕಾ ವಿಧಿಸಿರುವ ಶೇ.25 ರಷ್ಟು ಆಮದು ಸುಂಕವನ್ನ ಪ್ರತಿಭಟಿಸಬೇಕು. ಅಮೇರಿಕಾದ ಜೊತೆ ಸಮಗ್ರ, ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದವನ್ನಾಗಲಿ ಹಾಗೂ ಮುಕ್ತ ವ್ಯಾಪಾರ ಒಪ್ಪಂದವನ್ನಾಗಲಿ ಮಾಡಿಕೊಳ್ಳಬಾರದು, 

ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟನ್ನ ಪರಿಚಯಿಸಿದ ಕೇಂದ್ರ ಸರ್ಕಾರ ಎಪಿಎಂಸಿ ಆಧೀನೀಕರಣ, ಆಹಾರ ಧಾನ್ಯ ನಿರ್ವಾಹಣೆ, ಆಹಾರ ದಾಸ್ತಾನು, ಆಹಾರ ಸಂಸ್ಕರಣೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಮೂಲಕ ಖಾಸಗಿ ಬಂಡವಾಳ ವನ್ನ ಉತ್ತೇಜಿಸುವ ನೀತಿಯನ್ನ ಕೈಬಿಡಬೇಕು. 

ರೈತರ ಎಲ್ಲಾ ಬೆಳೆಗಳಿಗೆ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇಕಡಾ ಐವತ್ತು ರಷ್ಟು ಸೇರಿಸಿ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯನ್ನ ಸರ್ಕಾರಿ ಖಾತರಿಪಡಿಸಬೇಕು. ಸಮಗ್ರ ಸಾಲ ಮನ್ನ ಮಾಡಬೇಕು. ವೊದ್ಯುತ್ ಖಾಸಗೀಕರಣ ಮಾಡಬಾರದು. ಬಲವಂತದ ಹಾಗೂ ಅನ್ಯಾಯದ ಭೂಸ್ವಾದೀನ ಪದ್ದತಿ ರದ್ದಾಗಬೇಕು. 

ವಿಧವಾ, ವೃದ್ಧ್ಯಾಪ್ಯ, ಅಂಗವಿಕಲ, ಮುಂತಾದ ಎಲ್ಲಾ ಪಿಂಚಣಿಗಳನ್ನ ತಿಂಗಳಿಗೆ ಸರಿಯಾದ ಸಮಯದಲ್ಲಿ ನೀಡಬೇಕು. 10 ವರ್ಷದ ಹಖೆ ಡಿಸೇಲ್ ಟ್ರ್ಯಾಕ್ಟರ್ ಗಳ ನಿಷೇಧ ನಿಯಮ ಕೈಬಿಡಬೇಕು. 2006 ರ ಅರಣ್ಯ ಹಕ್ಕು ಕಾಯ್ದೆ ಕೈಬಿಡಬೇಕು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬಲಪಡಿಸಬೇಕು. ಕೋಮುವಾದಿ ಮತ್ತು ವಿಚ್ಚಧ್ರಕಾರಿಕ ಚಟುವಟಿಕೆಗಳನ್ನ ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅಶೋಕ್ 11 ಬೇಡಿಕೆಯ ಹಕ್ಕೋತ್ತಾಯ ಮಾಡಲಾಗುವುದಾಗಿ ತಿಳಿಸಿದರು. 

foreign and corporate companies left the country in protest.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close