ಡಿಸಿಸಿ ಬ್ಯಾಂಕ್ 35 ಕೋಟಿ ಲಾಭ, ಸೆ.10 ರಂದು ವಾರ್ಷಿಕ ಸಭೆ-DCC Bank annual meeting on September 10

 SUDDILIVE || SHIVAMOGGA

ಡಿಸಿಸಿ ಬ್ಯಾಂಕ್ 35 ಕೋಟಿ ಲಾಭ, ಸೆ.10 ರಂದು ವಾರ್ಷಿಕ ಸಭೆ-DCC Bank to have Rs 35 crore profit, annual meeting on September 10

Bank, Meeting


ಸೆ.10 ರಂದು ಡಿಸಿಸಿ ಬ್ಯಾಂಕ್ ನ ಎದುರಿನ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ವಾರ್ಷಿಕ ಮಹಾಸಭೆ ನಢಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ತಿಳಿಸಿದರು. 

ಕಳೆದ ವರ್ಷ ಬ್ಯಾಂಕ್ 36.70 ಕೋಟಿ ಲಾಭ ಮಾಡಲಾಗಿದೆ. ಎರಡನೇ ವಾರಿಗೆ ಉತ್ತಮ ಡಿಸಿ ಬ್ಯಾಂಕ್ ಎಂದು ಅಪೆಕ್ಸ್ ಆಯ್ಕೆ ಮಾಡಿ ಸನ್ಮಾನಿಸಿದೆ. ಈ ವರ್ಷ 8 ಸಾವಿರ ರೈತರಿಗೆ  1800 ಕೋಟಿ ಬೆಳೆಸಾಲ ನೀಡಲಾಗಿದೆ.  ಬರುವ ಮಾರ್ಚ್ ಗೆ 1400 ಕೋಟಿ ರೈತರಿಗೆ ಬೆಳೆ ಸಾಲದ ಗುರಿ ಹೊಂದಲಾಗಿದೆ. 

ಇನ್ನು ಎರಡು ವರ್ಷದಲ್ಲಿ  ಬ್ಯಾಂಜ್ 75 ವರ್ಷ ಮುಗಿಯಲಿದೆ 14 ಶಾಖೆಯ ಉದ್ಘಾಟನೆ ಮಾಡಲಾಗುವುದು. ಈಗಾಗಲೇ ತ್ಯಾಗರ್ತಿ ಚಿಕ್ಕಪೇಟೆ, ಗಾಜನೂರು, ತೀರ್ಥಹಳ್ಳಿ ಎಪಿಎಂಸಿ, ಬಾರಂದರಿನಲ್ಲಿ ಸೇರಿದಂತೆ ಐದು ಖಾಖೆ ಆರಂಭಿಸಲಾಗುತ್ತಿದೆ. 2.70 ಲಕ್ಷ ಗ್ರಾಮಾಂತರ ಭಾಗದಲ್ಲಿ ಗ್ರಾಹಕರಿದ್ದಾರೆ. ಹಾಲು ಉತ್ಪಾದಕರಿಗೆ ಫೋನ್ ಪೇ ಸೇವೆಯನ್ನ ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದರು.

1700 ಕೋಟಿ ಡಿಪಾಸಿಟ್ ಮಾಡಿದ್ದೇವೆ. 2600 ಕೋಟಿ ದುಡಿಯುವ ಬಂಡವಾಳವಿದೆ. 3600 ಕೋಟಿ ಕಳೆದ ವರ್ಷದಲ್ಲಿ ವ್ಯವಹಾರ ಆಗಿದೆ. ಸ್ಪರ್ಧಾತ್ಮಕವಾಗಿದೆ. ಸರ್ಕಾರದ ಶೇರುಧನವಿಲ್ಲದೆ ಡಿಸಿಸಿ ಶಿವಮೊಗ್ಗವನ್ನ‌ ನಡೆಸಲಾಗುತ್ತಿದೆ. ಕಳೆದ ವರ್ಷ ಶೇರು ಧನವನ್ನ ವಾಪಾಸ್ ನೀಡಿದ್ದೇವೆ ಎಂದರು. ಡಿಸಿಸಿ ಬ್ಯಕ್ ನೌಕರರಿಗೆ ಸರ್ಕಾರದ 7 ನೇ ವೇತನ ನೀಡುಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್ ಸಹ ನೀಡಿರಲಿಲ್ಲ. ನಾವು ನೀಡಿದ್ದೇವೆ ಎಂದರು. 

ಸಂಚಾರಿ ಬ್ಯಾಂಕ್ ಶಾಖೆಯನ್ನ ಆರಂಭಿಸಲಾಗಿದ್ದು ಮತ್ತೊಂದು ಸೇವೆಯನ್ನ ಆರಂಭಿಸಲಾಗುತ್ತಿದೆ. ಹಾಲು ಉತ್ಒಅದನೆಗೆ ಒಂದು ಯುನಿಟ್ ಗೆ 80000 ರೂ ಗೆ ಶೇ. ಮೂರು ರೂ ಬಡ್ಡಿಯಂತೆ ಕೊಡಲಾಗುತ್ತದೆ ಒಬ್ವರೈತನಿಗೆ  ಒಂದು ಯುನಿಟ್ ಎಂದರೆ 80 ಸಾವಿರ ರೂ ಸಾಲ ನೀಡಲಾಗುತ್ತಿದೆ. ಎಮ್ಮೆ, ಜರ್ಸಿ ಮೊದಲಾದ ಹೈಬ್ರಿಡ್ ತಳಿಗೆ ನೀಡಲಾಗುವುದು. ಮೇವಿಗೂ ಹಣ ನೀಡಲಾಗುತ್ತಿದೆ ಎಂದರು. 

ಜಿಲ್ಲೆಗೆ 10 ಪ್ರಾಥಮಿಕ ಸಹಕಾರ ಸಂಘಕ್ಕೆ ಪ್ರೋತ್ಸಹಧನ ನೀಡಲಾಗುತ್ತಿದೆ. ಇದನ್ನ ವಾರ್ಷಿಕ ಸಭೆಯಲ್ಲಿ ನೀಡಲಾಗುವುದು. ಕೋರ್ಟ್ ಮತ್ತು ಡಿಸಿಸಿ ಬ್ಯಾಂಕ್ ನಡುವಿನ ಜಾಗದಲ್ಲಿ ಅಮೃತ ಮಹೋತ್ಸವದ ನೆನಪಿನ ಕಟ್ಟಡವನ್ನ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು. 

ರಾಜಕಾರಣ, ಪಕ್ಷದ ರಾಜಕಾರಣ ಸೇರಿದಂತೆ ಮೂರು ರೀತಿಯ ರಾಜಕಾರಣ ಬಿಟ್ಟು ಆಡಳಿತ ನೀಡುತ್ತಿದ್ದೇವೆ. ನಮ್ಮ ಮೇಲಿನ ಇಡಿ ದಾಳಿ ನಡೆದಿರುವುದಕ್ಕೂ ಬ್ಯಾಂಕ್ ನ ವಾರ್ಷಿಕ ಸಭೆಗೂ ಸಂಬಂಧವಿಲ್ಲ. ಸಾಲದ ವಿಮೆಯನ್ನೂ ಬ್ಯಾಂಕ್ ನಿಂದ ಸಾಲಗಾಋಇಗೆ ಮಾಡಿಸಲಾಗುತ್ತಿದೆ. ಇದು ಹೊಸ ಯೋಜನೆಯಾಗಿದೆ ಎಂದು ಆರ್ ಎಂ ಗೌಡರು ಸ್ಪಷ್ಟಪಡಿಸಿದರು. 

DCC Bank annual meeting on September 10 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close