SUDDILIVE || SHIVAMOGGA
ಬಿಜೆಪಿ ಕ್ಷುಲ್ಲಕ ರಾಜಕಾರಣವನ್ನ ಬಿಡಬೇಕು-ಹೆಚ್ ಸಿ ಯೋಗೀಶ್-BJP should stop petty politics - HC Yogish
ಮೈಸೂರು ದಸರಾ ಉದ್ಘಾಟನೆಯ ವಿಷಯದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್ ದೂರಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುವ ನಾಡಹಬ್ಬ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಜವಬ್ದಾರಿ ನೀಡಲಾಗಿದೆ. ಭಾನುಮುಷ್ತಾಕ್ ಅವರನ್ನ ಆಯ್ಕೆ ಮಾಡಿದಾಗ ಬಿಜೆಪಿ ಟ್ವೀಟ್ ಮತ್ತು ಸುದ್ದಿಗೋಷ್ಠಿಯಲ್ಲಿ ವಿರೋಧಿಸಿದ್ದಾರೆ. ಸಾಹಿತ್ಯದಲ್ಲಿ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಇದು ಕನ್ನಡಿಗರ ಹೆಮ್ಮೆಯಾಗಿದೆ ಎಂದರು.
ಇನ್ಫೋಸಿಸಿ ಅವರ ಅಳಿಯ ನಮ್ಮವರು ಎನ್ನುವ ಬಿಜೆಪಿ ಭಾನುಮುಷ್ತಾಕ್ ಅವರ ವಿಚಾರದಲ್ಲಿ ಡಬ್ಬಲ್ ಸ್ಟ್ಯಾಂಡರ್ಡ್ ತೋರುತ್ತಾರೆ. ಶಿವಮೊಗ್ಗದಲ್ಲಿಯೂ ಬೆಳ್ಳಿ ಚಾಮುಂಡಿಯ ನೆರವಣಿಗೆ ಆರಂಭಿಸಿದ್ದು ಸಿಎಂ ಸಿದ್ದರಾಮಯ್ಯರಾಗಿದ್ದಾರೆ. ಅಂಬೇಡ್ಕರ್ ಮತ್ತು ಬೆಳ್ಳಿ ಚಾಮುಂಡಿಯನ್ನ 2017 ರಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. ಆನೆಯ ಮಾವುತರು ಮುಸ್ಲೀಂ ಆಗಿದ್ದಾರೆ. ದೇವರ ವಿಗ್ರಹವನ್ನ ಆನೆಯ ಮೇಲೆ ಇಡುವರು ಮಾವುತರಾಗಿದ್ದಾರೆ.
ಅಂಬುವನ್ನ ಕಡಿಯುವುದು ತಹಶೀಲ್ದಾರ್ ಆಗಿದ್ದಾರೆ. ತಹಸೀಲ್ದಾರ್ ಅವರೆ ಒಂದು ವೇಳೆ ಮುಸ್ಲೀಂ ಆಗಿದ್ದಾರೆ ಇವರನ್ನ ಬೇಡ ಎನ್ನಲಾಗುತ್ತದಾ ಎಂದು ಪ್ರಶ್ನಿಸಿದ ಅವರು, ದಸರಾ ಉದ್ಘಾಟನೆಯ ವಿಚಾರದಲ್ಲಿ ಶಿವಮೊಗ್ಗದ ಶಾಸಕರು ಎಚ್ಚರಿಕೆ ಗಂಟೆ ನೀಡಿದ್ದಾರೆ. ನಾಡಹಬ್ಬಕ್ಕೆ ಶಾಸಕರು ಎಚ್ಚರಿಕೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು, ಹಿಂದೂ ಕಮ್ಯೂನಿಟಿ ಅಲ್ಲದ ಅಧಿಕಾರಿಗಳಿಗೆ ದಸರಾ ಹಬ್ಬ ಆಚರಿಸಲು ಅಡ್ಡಿಪಡಿಸಿದರೆ ಹೇಗೆ ಎಂದು ದೂರಿದರು.
2013 ರಲ್ಲಿ ಮೊದಲನೇ ಮೇಯರ್ ಆಗಿದ್ದ ಖುರ್ಷಿದಾ ಬಾನು ಅವರೇ ಅಂದಿನ ದಸರಾ ಹಬ್ಬ ಆಚರಿಸಲಾಗಿದೆ. ಸಾಹಿತಿ ನಾ.ಡಿಸೋಜ ಸಹ ದಸರಾ ಉದ್ಘಾಟಿಸಿದ್ದಾರೆ. ನಿಮ್ಮ ರಾಜಕೀಯವನ್ನ ಜನ ಮೆಚ್ಚುವಂತೆ ಮಾಡಿ ಎಂದು ಸಲಹೆ ನೀಡಿದರು.
BJP should stop petty politics - HC Yogish