SUDDILIVE || THIRTHAHALLI
ತೀರ್ಥಹಳ್ಳಿಗೆ ಮತ್ತೊಂದು ಕಾಡಾನೆ ಪ್ರತ್ಯಕ್ಷ-Another wild elephant sighted in Thirthahalli
ಶೃಂಗೇರಿ ಮಾರ್ಗವಾಗಿ ಕಾಡಾನೆಯೊಂದು ತೀರ್ಥಹಳ್ಳಿಯಲ್ಲಿ ಪ್ರತ್ಯಕ್ಷವಾಗಿದೆ. ಆನೆ ಬೇಗಾರು - ಹೊಳೆಕೊಪ್ಪ ಸಮೀಪ ಇರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಬಹುತೇಕ ಆಗುಂಬೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ತೀರ್ಥಹಳ್ಳಿಯ ಸಮೀಪ ಬರುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾತಣವಾಗಿದೆ.
ಅರಣ್ಯ ಇಲಾಖೆ ಈ ಆನೆಯನ್ನ ಹಿಡೀತಾರೋ, ಓಡಿಸುತ್ತಾರೋ ಗೊತ್ತಿಲ್ಲ. ಆದರೆ ಆನೆಗಳ ಹಾವಳಿಗೆ ಜನರ ಭಯ ಹೆಚ್ಚಾಗಿದೆ. ಬೆಳಗ್ಗಿನಿಂದ ಆನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ಕಾಲರ್ ಐಡಿ ಹೊಂದಿದ ಆನೆಯೊಂದು ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಬಹಳ ಚರ್ಚೆಗೆ ಕಾರಣವಾಗಿತ್ತು. ಈ ಆನೆ ಜೂನ್ 1 ರಂದು ಕಾಣಿಸಿಕೊಂಡಿತ್ತು. ಮೂರು ತಿಂಗಳ ನಂತರ ಮತ್ತ್ತೊಂದು ಆನೆ ಕಾಣಿಸಿಕೊಂಡಿದೆ.
Another wild elephant sighted in Thirthahalli
