SUDDILIVE || SHIVAMOGGA
ತಿರುನೆಲ್ವೇಲಿ-ಶಿವಮೊಗ್ಗ ನಡುವೆ ಚಲಿಸಲಿದೆ ವಿಶೇಷ ರೈಲು-Special train to run between Tirunelveli-Shivamogga
ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಮತ್ತು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ ಒಂದು ಹೊಸ ರೈಲು ವಾರಕ್ಕೊಮ್ಮೆ ಚಲಿಸಲಿದೆ. ಈ ರೈಲು ಸೆ.7 ರಿಂದ ಸೇವೆ ಆರಂಭಿಸಲಿದೆ.
ಸಂಸದರ ಮನವಿ ಮೇರೆಗೆ ಆರಂಭವಾಗುತ್ತಿರುವ ಈ ರೈಲು ಮೊದಲಿಗೆ ಪ್ರಾಯೋಗಿಕವಾಗಿ ರೈಲು ಗಾಡಿ ಸಂಖ್ಯೆ 06103 ಸೆ.7 ರಂದು ಮದ್ಯಾಹ್ನ 03.40 ಕ್ಕೆ ತಿರುನೆಲ್ವೇಲಿಯಿಂದ ಹೊರಟು ಶಿವಮೊಗ್ಗಕ್ಕೆ ಸೆ.8 ರಂದು ಮದ್ಯಾಹ್ನ 01.00 ಕ್ಕೆ ತಲುಪಲಿದೆ. ಹಾಗೂ ಅದೇ ದಿನ ಮದ್ಯಾಹ್ನ ರೈಲು ಗಾಡಿ ಸಂಖ್ಯೆ 06104 ಶಿವಮೊಗ್ಗದಿಂದ ಮದ್ಯಾಹ್ನ 2.20 ಕ್ಕೆ ಹೊರಟು ದಿನಾಂಕ:09.09.2025 ರ ಬೆಳಗ್ಗೆ 09.53 ಕ್ಕೆ ತಿರುನೆಲ್ವೇಲಿಗೆ ತಲುಪಲಿದೆ.
ವಿಶೇಷವಾಗಿ ಮುಂದೆ ಬರಲಿರುವ ದಸರಾ, ದೀಪಾವಳಿ ಪ್ರಯುಕ್ತ ಪ್ರಯಾಣೀಕರಿಗೆ ಅನುಕೂಲವಾಗಲೆಂದು ಈ ರೈಲು ವಾರಕ್ಕೆ ಒಮ್ಮೆ ಹಾಗೂ ಎಂಟು ವಾರಗಳು (ಪ್ರತಿ ಬಾನುವಾರ ತಿರುನೆಲ್ವೇಲಿಯಿಂದ ಹೊರಟು ಮತ್ತು ಪ್ರತಿ ಸೋಮವಾರ ಶಿವಮೊಗ್ಗದಿಂದ ಹೊರಡಲಿದೆ 07.09.2025 ರಿಂದ 27.10.2025ರ ವರೆಗೆ) ಪ್ರಾಯೋಗಿಕವಾಗಿ ಸಂಚರಿಸಲಿದೆ.
ಶಿವಮೊಗ್ಗದಿಂದ ಬೀರೂರು, ತುಮಕೂರು, ಬೆಂಗಳೂರು, ಜೋಲಾರ್‌ಪೆಟ್ಟೆ, ಮಧುರೈ, ಮೂಲಕ ತಿರುನೆಲ್ವೇಲಿಗೆ ತಲುಪಲಿದೆ. ಈ ರೈಲನ್ನು ಸಾರ್ವಜನಿಕರು ಹೆಚ್ಚಾಗಿ ಬಳಕೆ ಮಾಡಿ ಕೊಂಡಲ್ಲಿ ಕಾರ್ಯಸಾಧ್ಯತೆ (Feasibility) ಕುರಿತು ಮಾನ್ಯ ರೈಲ್ವೆ ಸಚಿವರ ಮನವೊಲಿಸಿ ಇದೇ ರೈಲನ್ನು ಖಾಯಂ ಆಗಿ ಶಿವಮೊಗ್ಗದಿಂದ ತಿರುನೆಲ್ವೇಲಿವರೆಗೆ ಓಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಂದರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Special train to run between Tirunelveli-Shivamogga
