SUDDILIVE || SHIVAMOGGA
ಸೆಪ್ಟಂಬರ್ 5 ಕ್ಕೆ ಓಂಶಿವಂ ಚಿತ್ರ ಬಿಡುಗಡೆ-Om Shivam cinema release on sept.5th
ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್ ನಿರ್ಮಿಸಿ,ಅಲ್ವಿನ್ ನಿರ್ದೇಶನದ ಓಂ ಶಿವಂ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.ಎಂದು ನಿರ್ದೇಶಕ ಅಲ್ವಿನ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಚಿತ್ರ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.ನೈಜ ಕಥೆಯನ್ನು ಆಧರಿಸಿದ ರೊಮ್ಯಾಂಟಿಕ್ ಆಕ್ಷನ್ ಪ್ರಕಾರದ ಚಿತ್ರವಾಗಿದೆ ಎಂದು ತಿಳಿಸಿದರು.
ಸಿನಿಮಾ ಓಂ ಶಿವಂ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಸಿನಿಮಾವಾಗಿದೆ. ತಂದೆ ಕಳೆದುಕೊಂಡಾಗ ಮಗಳು ಕಷ್ಟ ಪಡುವ ಸಿನಿಮಾವಿದು. ಸಿಂಗಲ್ ಪೇರೆಂಟ್ಸ್ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆನೂ ಸಿನಿಮಾ ಹೇಳುತ್ತಿದೆ. ಹುಡಿಗಿಯರ ಮೊಬೈಲ್ ಗೆ ಮೆಸೆಜ್ ಬಂದಾಗ ಅದಕ್ಕೆ ರಿಪ್ಲೇ ಮಾಡಿದಾಗ ಉಂಟಾಗುವ ಸಮಸ್ಯೆಯನ್ನ ಸಿನಿಮಾದಲ್ಲಿ ಹೇಳಲಾಗಿದೆ ಎಂದರು.
ವೀರೇಶ್ ಎನ್ ಕೆಎ, ಕವಿರಾಜ್, ಗೌಸ್ ಪೀರ್, ಶ್ರೀರಾಮ್ ತಪಸ್ವಿ ಬರೆದಿರುವ ಹಾಡುಗಳಿವು. ಮಂಡ್ಯ ಬೆಂಗಳೂರು ಮಳವಳ್ಳಿಯಲ್ಲಿ 48 ದಿನಗಳಲ್ಲಿ ಶೂಟಿಂಗ್ ಆಗಿದೆ. ಶಿವಮೊಗ್ಗದ ಕಲಾವಿದರೂ ಇದ್ದಾರೆ. ಸೆ.5 ರಂದು ರಾಜ್ಯದ 90 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಜಯ್ ನವರು ಡಿಸ್ಟ್ರಿಬ್ಯೂಟ್ ಮಾಡ್ತಾಯಿದ್ದಾರೆ ಎಂದು ತಿಳಿಸಿದರು.
ಆಲ್ವಿನ್ ಫ್ರಾನ್ಸಿಸ್ ಅವರ 4 ಸಿನಿಮಾ ನಿರ್ದೇಶಿಸಿರುವ ಚಿತ್ರ ಇದಾಗಿದೆ. ಜಠಾಧರ ಎಂದು ಸಿನಿಮಾ ಆಯ್ಕೆ ಮಾಡಿಕೊಂಡಿದ್ವಿ ಆದರೆ ಜಠಾಧರವನ್ನ ಶಿವಣ್ಣ ಅಭಿನಯಿಸುತ್ತಿರುವ ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಕಾರಣ ಓಂ ಶಿವಂ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಆತನ ರುದ್ರತಾಂಡವ ಬಿತ್ತರಿಸಲಾಗುತ್ತದೆ. ವಿರಾನಿಕ ಶೆಟ್ಟಿ ಮಾತನಾಡಿ ಪ್ರಸ್ತುತ ಲವ್ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ ಎಂದರು.
ನಿರ್ದೇಶಕ ಕೃಷ್ಣ ಮಾತನಾಡಿ, ಒಳ್ಳೆಯ ಬಜೆಟ್ ನಲ್ಲಿ ಸಿನಿಮಾ ಶೂಟಿಂಗ್ ಆಗಿದೆ. ಸಿನಿಮಾದಲ್ಲಿ ಎಲ್ಲೂ ಬೌಂಡರಿ ಹಾಕಿಲ್ಲ. ಪ್ರೀತಿ ಮತ್ತು ಆಕ್ಷನ್ ಮೂವಿಯಾಗಿದೆ ಎಂದರು.
Om Shivam cinema release on sept.5th

