SUDDILIVE || SHIVAMOGGA
ಅಂಬಾರಿ ಉತ್ಸವಕ್ಕೆ ಮೂರು ಗಜಗಳ ಆಗಮನ-Three Elephant arrived for the Dassara Ambari festival
ದಸರಾ ಉತ್ಸವಕ್ಕೆ ಅಂಬಾರಿ ಹೋರಲು ಸಕ್ರೆಬೈಲಿನ ಆನೆಬಿಡಾರದಲ್ಲಿದ್ದ ಮೂರು ಆನೆಗಳನ್ನ ಕಳುಹಿಸಿಕೊಡಲಾಗಿದೆ. ಬಾಲಣ್ಣ, ಸಾಗರ ಮತ್ತು ಬಹದ್ದೂರು ಎಂಬ ಮೂರು ಆನೆಗಳನ್ನ ದಸರಾದ ಅಂಬಾರಿ ಉತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಈ ಕುರಿತು ಸುದ್ದಿಲೈವ್ ಜೊತೆ ಮಾತನಾಡಿದ ಡಿಸಿಎಫ್ ಪ್ರಸನ್ನ ಕುಮಾರ್ ಪಟಗಾರ್, ಮೂರು ಆನೆಗಳು ನಾಳೆಯಿಂದ ಮುಂದಿನ 6 ದಿನಗಳವರೆಗೆ ತಾಲೀಮು ನಡೆಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಸಾಗರ್ ಆನೆಯ ಜೊತೆ ಎರಡು ಹೆಣ್ಣಗಳನ್ನ ಕರೆತರಲಾಗಿತ್ತು. ಈ ಬಾರಿ ಮೂರು ಗಂಡಾನೆಗಳನ್ನ ಕರೆಯಿಸಲಾಗಿದೆ. ಮೂರು ಆನೆಗಳು ಕೋಟೆ ವಾಸವಿ ಶಾಲೆಯಲ್ಲಿ ತಂದಿರಿಸಲಾಗಿದೆ. ಆನೆಗೆ ಪೂಜೆ ಮಾಡುವ ಮೂಲಕ ಬರಮಾಡಿಕೊಳ್ಳಲಾಗಿದೆ.
Three Elephant arrived for the Dassara Ambari festival