SUDDILIVE || SHIVAMOGGA
ಜಾತಿ ಸಮೀಕ್ಷೆ ಹಿನ್ನಲೆ ಸೆ.4 ರಂದು ಆರ್ಯ ಈಡಿಗರ ಸಭೆ-Arya Ediga's meeting on September 4th in the backdrop of caste survey
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಜಾತಿ ಸರ್ವೆ ನಡೆಯಲಿದ್ದು, ನಮ್ಮಲ್ಲಿ ಏನು ಹೆಸರು ಹೆಸರಿಸಬೇಕು ಎಂದು ತೀರ್ಮಾನಿಸಲು ಸೆ.4 ರಂದು ಆರ್ಯ ಈಡಿಗರ ಸಂಘದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಜಿಲ್ಲೆಯ ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರುಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸೆ.7 ರಂದು ಕುವೆಂಪು ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರೂಜಿ ಅವರ 171 ನೇ ಜಯಂತಿ ನಡೆಯಲಿದೆ. ಸಚಿವರಾದ ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ, ಸಂಸದರು, ಶಾಸಕರು ಭಾಗಿಯಾಗಲಿದ್ದಾರೆ ಎಂದರು.