ad

ಸೆ.4 ರಂದು ಸೌಹಾರ್ದ ನೆಡಿಗೆ-Friendly walk on September 4th

 SUDDILIVE || SHIVAMOGGA

ಸೆ.4 ರಂದು ಸೌಹಾರ್ದ ನೆಡಿಗೆ-Friendly walk on September 4th

Friendly, walk


ಶಿವಮೊಗ್ಗದಲ್ಲಿ ಎಲ್ಲಾ ಧರ್ಮಿಯರ ಸೌಹಾರ್ಧತೆಯಿಂದ ಬದಕುವ ನಿಟ್ಟಿನಲ್ಲಿ ಹುಟ್ಟಿಕೊಂಡ ನಮ್ಮ‌ನಡಿಗೆ  ಸೌಹಾರ್ಧ ಕಡೆಗೆ ಈ ಬಾರಿ ಸೌಹಾರ್ಧ ನಡಿಗೆ ಹಮ್ಮಿಕೊಂಡಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಕೀಲ ಶ್ರೀಪಾಲ್ ಸೆ.4 ರಂದು ಸೌಹಾರ್ಧ ನಡಿಗೆಯಲ್ಲಿ ಗೋಪಿ ವೃತ್ತದಲ್ಲಿ ಮಾನವ ಸರಪಳಿ ನಡೆಸಲಾಗುತ್ತಿದೆ. ಸಂಜೆ 4 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಾಂಸ್ಕೃತಿಕ ಮತ್ತು ಶಾಂತಿ ಸಭೆ ನಡೆಯಲಿದೆ. ಹರ್ಷ ಸಾವಿನಂತರ ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಕೋಮು ರಾಜಕಾರಣ ಕಡಿಮೆಯಾಗಿದೆ ಎಂದರು. 

ಶಾಂತಿ ಸಭೆ ನಡೆಯಲಿದೆ, ಬೆಕ್ಕಿನಕಲ್ಮಠ, ಫಾದರ್ ಡಿಸೋಜ, ಪಿಂಟೋ, ಶಾ ಅಬ್ದುಲ್ ಅಮಿದ್, ಜಾಮೀಯ ಮಸೀದಿ ಮೌಲ್ವಿಗಳು, ಡಿಸಿ ಎಸ್ಪಿ ಭಾಗಿಯಾಗಲಿದ್ದಾರೆ. ಸಂಘಟಿಕರು ಯಾರೂ ವೇದಿಕೆ ಮೇಲೆ ಇರುವುದಿಲ್ಲ. ಕಲಾತಂಡ, ಕೆ ಯುವರಾಜ್ ಅವರ ಹಾಡು, ಇಮ್ತಿಯಾಜ್ ಸುಲ್ತಾನ್ ಮತ್ತು ಇತರರಿಂದ ಸಾಂಸ್ಕೃತಿಕ ಹಾಡುಗಳು ಇರಲಿದೆ. 4 ಗಂಟೆಗೆ ಈ ಕಾರ್ಯಕ್ರಮ ಜರುಗಲಿದೆ. 

ಅಫ್ತಾಬ್ ಪರ್ವೇಜ್ ಮಾತನಾಡಿ, ಸೆ.5 ರಂದು ಈದ್ ಹಬ್ಬ ನಡೆಯಲಿದೆ. ಈದ್ ನೆರವಣಿಗೆ ಸೆ.15 ರಂದು ಮಧ್ಯಹ್ನ ಗಾಂಧಿ ಬಜಾರ್ ಜಾಮಿಯಾ ಮಸೀದಿ ಆರಂಭವಾಗಲಿದೆ ಎಂದರು. 

ಕಿರಣ್ ಕುಮಾರ್ ಮಾತನಾಡಿ, ನಾಲ್ಕು ವರ್ಷದಿಂದ ಸೌಹಾರದಧ ನಡಿಗೆ ನಡೆಸಲಿದ್ದಾರೆ. ಸೌಹಾರ್ಧ ನಡಿಗೆ ಒಂದೇ ವೇದಿಕೆಯ ಅಡಿ ಜನ ಸೇರಲಿದ್ದಾರೆ. ಶಾಂತಿ ಪರಂಪರೆಯನ್ನ ಮುಂದುವರೆಸಲಾಗುತ್ತಿದೆ. 

ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ಗುರುಮೂರ್ತಿ ಕಿರಣ್, ಮಹಮದ್ ಹುಸೇನ್, ಜಗದೀಶ್, ಪಾಲಾಕ್ಷಿ, ರಾಘವೇಂದ್ರ, ವಾಹಬ್ ಸಾಹೇಬರು, ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು. 

Friendly walk on September 4th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close