SUDDILIVE || SHIVAMOGGA
ಪತ್ರಕರ್ತನಿಗೆ ಹಲ್ಲೆಗೆ ಯತ್ನ ಜೀವಬೆದರಿಕೆ-Attempted assault on journalist, death threat
![]() |
| ಪತ್ರಕರ್ತ ವಿನಯ್ ತೇಕ್ಲೆ |
ಶಿವಮೊಗ್ಗದ ಆಹಾರದ ದಸರಾದಲ್ಲಿ ಪತ್ರಕರ್ತನಿಗೆ ಅವಮಾನಿಸಲಾಗಿದೆ. ಕೇವಲ ಒಂದು ಬಾಳೆಹಣ್ಣಿಗೆ ಆಹಾರ ದಸರಾದಲ್ಲಿ ವರದಿ ಮಾಡಲು ಹೋಗಿದ್ದ ಪತ್ರಕರ್ತನನ್ನ ಅವಮಾನಿಸಲಾಗಿದೆ.
ಆಹಾರ ದಸರಾದಲ್ಲಿ ಬಾಳೆಹಣ್ಣು ಮತ್ತು ಇಡ್ಲಿ ತಿನ್ನುವ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆಯ ವರದಿಗಾಗಿ ತೆರಳಿದ್ದ ರಾಜ್ಯ ಮಟ್ಟದ ಟಿವಿ ಚಾನೆಲ್ ವರದಿಗಾರ ಆಟವೆಲ್ಲ ಮುಗಿದ ಮೇಲೆ ಎಲ್ಲರೂ ಸೇವಿಸಲು ಸಾರ್ವಜನಿಕರು ಬಾಳೆಹಣ್ಣು ತಿನ್ನಲು ಮುಂದಾಗಿದ್ದಾರೆ. ಇದೇ ವೇಳೆ ಹಣ್ಣು ತಿನ್ನಲು ಮುಂದಾದ ಪತ್ರಕರ್ತ ವಿನಯ್ ತೇಕ್ಲೆನನ್ನ ಪಾಲಿಕೆಯ ಪೌರಕಾರ್ಮಿಕರು ತಡೆದಿದ್ದಾರೆ.
ಒಂದು ಬಾಳೆಹಣ್ಣು ತಿಂದ ಕಾರಣ ಆತನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಆತನಿಗೆ ಬೈಯ್ದ ಸಿಬ್ಬಂದಿ ಜೀವಬೆದರಿಕೆಯನ್ನೂ ಹಾಕಿರುವುದಾಗಿ ತಿಳಿದುಬಂದಿದೆ. ಹಲ್ಲೆಗೆ ಯತ್ನಿಸಿದ ಸಿಬ್ಬಂದಿಯ ಹೆಸರುಗೊತ್ತಿದ್ದರೂ ಇಲ್ಲಿ ಸಧ್ಯಕ್ಕೆ ಪ್ರಕಟಿಸಿಲ್ಲ. ಈ ಪ್ರಕರಣ ಇಲ್ಲಿಗೆ ಮುಗಿದರೆ ಆತನ ಹೆಸರು ಕೈಬಿಡಲಾಗುವುದು. ಘಟನೆ ಕುರಿತಂತೆ ಪಾಲಿಕೆ ಆಯುಕ್ತರ ಗಮನಕ್ಕೂ ಪತ್ರಕರ್ತ ವಿನಯ್ ತೇಕ್ಲೆ ತಂದಿರುವುದಾಗಿ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ಒಂದು ಬಾಳೆಹಣ್ಣಿಗೆ ಇಷ್ಟುದೊಡ್ಡ ಮಟ್ಟಕ್ಕೆ ಸಿಬ್ಬಂದಿಗಳು ಪತ್ರಕರ್ತರ ಜೊತೆ ನಡೆದುಕೊಳ್ಳುವುದಾದರೆ ಇನ್ನು ಸಾರ್ವಜನಿಕರ ಜೊತೆ ಸೌಜನ್ಯದಿಂದ ನಡೆದುಕೊಳ್ಳುತ್ತಾರಾ ಎಂಬ ಶಂಕೆ ವ್ಯಕ್ತವಾಗಿದೆ.
Attempted assault on journalist, death threat
