SUDDILIVE || SHIVAMOGGA
ವಿಮಾನ ನಿಲ್ದಾಣಕ್ಕೆ ಬಾಡಿಗೆ ಆಟೋ ರಿಕ್ಷದ ಹಾವಳಿ ತಪ್ಪಿಸುವಂತೆ ಮನವಿ-Appeal to avoid the nuisance of rented auto rickshaws to the airport
ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಿಂದ ಬಾಡಿಗೆ ಮಾಡುತ್ತಿರುವುದು ಕಾನೂನು ಉಲ್ಲಂಘನೆಯಾಗಿದ್ದರು ಸಹ ಅವಕಾಶ ನೀಡಿರುವುದನ್ನು ಖಂಡಿಸಿ ಇಂದು ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘ ಪ್ರಾದೇಶಿಕ ಸಾರಿಗೆ ಕಚೇರಿ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಸೋಗಾನೆ ವಿಮಾನ ನಿಲ್ದಾಣ ಚಾಲಕರು ಮತ್ತು ಮಾಲೀಕರ ಸಂಘದಲ್ಲಿ 60 ಜನ ಸದಸ್ಯರಿದ್ದು ಎರಡು ವರ್ಷಗಳಿಂದ ಯಾವುದೇ ಕಾನೂನು ಉಲ್ಲಂಗನೆಯಾಗದೆ, ಬಾಡಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರು ವಿಮಾನ ನಿಲ್ದಾಣದ ಒಳಗಡೆ ಬಂದು ಯಾವುದೇ ಕಾನೂನು ಪಾಲಿಸದೆ ಅನುಮತಿ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿರುವುದು ಕಂಡುಬಂದಿದೆ ಇದರಿಂದ ಕಾರು ಚಾಲಕರಿಗೂ ಮತ್ತು ಆಟೋ ಚಾಲಕರಿಗೂ ಪ್ರತಿದಿನ ವಿಮಾನ ಪ್ರಯಾಣಿಕರ ಎದುರು ಮಾತಿನ ಚಕಮಕಿ ನಡೆಯುತ್ತಿದೆ.
ವಿಮಾನ ನಿಲ್ದಾಣವು ಬಸ್ ನಿಲ್ದಾಣದಿಂದ 14 ವರೆ ಕಿಲೋಮೀಟರ್ ದೂರದಲ್ಲಿದ್ದು ಆಟೋ ಚಾಲಕರಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಓಡಾಡಲು ಅವಕಾಶವಿರುತ್ತದೆ. ಅಂದರೆ 10 ಕಿ.ಮೀ ವ್ಯಾಪ್ತಿ ಮಾತ್ರ ಅವರಿಗೆ ಅವಕಾಶವಿದ್ದರೂ ಸಹ ವಿಮಾನ ನಿಲ್ದಾಣದವರೆಗೆಬಂದು ಪ್ರಯಾಣಿಕರನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದು ಪ್ರತಿದಿನ ನಡೆಯುತ್ತಿದೆ ಇದು ಕಾನೂನುಬಾಹಿರವಾದರೂ ಯಾವುದೇ ಕ್ರಮ ಜರುಗುತ್ತಿಲ್ಲ.
ಈ ಕುರಿತು ಹಲವಾರು ಬಾರಿ ಸಂಘವು ಮನವಿ ನೀಡಿದರು ಸಹ ಕ್ರಮ ಜರು ಜರಗದೆ ಇರುವುದು ಕಂಡು ಬಂದಿದೆ ಎಂದು ಸಂಘಟನೆಯು ಆರೋಪಿಸಿದೆ.
Appeal to avoid the nuisance of rented auto rickshaws to the airport
