SUDDILIVE || SHIVAMOGGA
ನ್ಯಾಯಾಲಯದ ಹಿಂಭಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ನಿಷೇಧ, ಕಾಂಗ್ರೆಸ್ ಪಕ್ಷದ ಕಚೇರಿ ಎದುರಿನ ರಸ್ತೆಗೆ ಏಕಮುಖ ಸಂಚಾರಕ್ಕೆ ಡಿಸಿ ಆದೇಶ-Parking prohibited behind the court, DC orders one-way
ನಗರದ ನ್ಯಾಯಾಲಯದ ಹಿಂಭಾಗದಿಂದ ಕೆಜಿಐಡಿ ಕಚೇರಿಯವರೆಗೆ ವಾಹನ ನಿಲುಗಡೆಯನ್ನ ನಿಷೇಧಿಸಲಾಗಿದ್ದು ಕಾಂಗ್ರೆಸ್ ಪಕ್ಷದ ಕಚೇರಿ ಎದುರಿನ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗುವ ರಸ್ತೆಯನ್ನ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್‌ವರೆಗೆ ಇರುವ ರಸ್ತೆಯಲ್ಲಿ ಎರಡು ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ನ್ಯಾಯಾಲಯದ ಹಿಂಬದಿಯಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಓಡಾಡಲು ತೀವ್ರ ಅಡಚಣೆಯಾಗುತ್ತಿದೆ ಹಾಗೂ ರಸ್ತೆಯು ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ಕೆ 1988 ಕಲಂ 115ರ ಅನ್ವಯ ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್‌ವರೆಗೆ ಇರುವ ರಸ್ತೆಯಲ್ಲಿ ಎರಡು ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
ಏಕಮುಖ ಸಂಚಾರಕ್ಕೆ ಆದೇಶ
ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಇಂದಿರಾ ಗಾಂಧಿ ರಸ್ತೆಯಲ್ಲಿ ಬಾಲರಾಜ್ ಅರಸ್ ರಸ್ತೆ ಕಡೆಯಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಡೆಗೆ ಸಂಚರಿಸಲು (ENTRY) ಅವಕಾಶವನ್ನು ನೀಡಿ, ಇಂದಿರಾ ಗಾಂಧಿ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಡೆಯಿಂದ ಬಾಲರಾಜ್ ಅರಸ್ ರಸ್ತೆ ಕಡೆಗೆ ಸಂಚಾರ ನಿಷೇಧಿಸಿ (NO ENTRY) ಏಕಮುಖ ಸಂಚಾರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
Parking prohibited behind the court, DC orders one-way traffic
