ad

ಏರ್ಪೋರ್ಟ್ ವಿಚಾರದಲ್ಲಿ ರಾಜಕಾರಣ ಬೇಡ ಎಂದ ಮಾಜಿ ಡಿಸಿಎಂ ಅವರ ಮಾತನ್ನ ಸಂಸದರು ಮತ್ತು ಸಚಿವರು ಕೇಳ್ತಾರಾ?Will MPs and ministers listen to the former DCM's statement

 SUDDILIVE || SHIVAMOGGA

ಏರ್ಪೋರ್ಟ್ ವಿಚಾರದಲ್ಲಿ ರಾಜಕಾರಣ ಬೇಡ ಎಂದ ಮಾಜಿ ಡಿಸಿಎಂ ಅವರ ಮಾತನ್ನ ಸಂಸದರು ಮತ್ತು ಸಚಿವರು ಕೇಳ್ತಾರಾ?-Will MPs and ministers listen to the former DCM's statement that there should be no politics in the airport issue?

Airport, Dcm


ಏರ್ ಪೋರ್ಟ್ ವಿಷಯದಲ್ಲಿ ಜಿದ್ದಿಗೆ ಬಿದ್ದಿರುವ ಸಂಸದರು ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಬ್ಬರಿಗೂ ಮಾಜಿ ಡಿಸಿಎಂ ಹಾಗೂ ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ ಕಿವಿ ಮಾತು ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನ‌ನಿಲ್ದಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಹಣ ನೀಡಿದೆ. ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪರಸ್ಪರ ಟೀಕೆಗಳಲ್ಲಿ ಮುಳುಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಇಬ್ವರ ನಡುವೆ ಸ್ಪರ್ಧೆ ಅಥವಾ ರಾಜಕಾರಣ ಬೇಡ, ಇಬ್ವರೂ ಕುಳಿತು ಮಾತುಕತೆ ಮೂಲಕ ಜನರ ಸಮಸ್ಯೆಗೆ ಮುಂದಾಗುವಂತೆ ಕಿವಿ ಮಾತಾಡಿದ್ದಾರೆ. 

ನೈಟ್ ಲ್ಯಾಂಡಿಂಗ್ ಗೆ ಎಲ್ಲಾ ಮೆಟಿರಿಯಲ್  ಬಂದಿದೆ ಎಂದು ಸಂಸದರು ಹೇಳಿದರೆ, ಉಸ್ತುವಾರಿ ಸಚಿವರು ಈ ಮೊದಲೆ ಗೊತ್ತಿರಲಿಲ್ವಾವೆಂದು ಹೇಳುತ್ತಾರೆ. ಹಾಗಾಗಿ ಇಬ್ಬರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ. ರಾಜಕಾರಣ ಬೇಡ. ನಿಮ್ಮ ಜಗಳದಲ್ಲಿ ನಾಗರೀಕರಿಗೆ ಅನ್ಯಾಯಮಾಡಬೇಡಿ ಎಂದು ಸಲಹೆ ನೀಡಿದರು. 

ಮೊನ್ನೆ ಶನಿವಾರ ಸಂಸದರು ನಾವು ಶಿವಮೊಗ್ಗ ಏರ್ ಪೋರ್ಟ್ ಇಟ್ಟುಕೊಂಡು ದೆಹಲಿಯಿಂದ ಹುಬ್ಬಳ್ಳಿಗೆ ಬಂದು ನಂತರ ಬೈರೋಡ್ ಬರುವಂತಾಗಿದೆ. ತಪ್ಪು ಮಾಡಿಬಿಟ್ವಿ ಎಂದು ಹೇಳಿದ್ದರು. ಇದಕ್ಕೆ ಸಚಿವ ಮಧು ಬಂಗಾರಪ್ಪ ತರಾತುರಿಯಲ್ಲಿ ಉದ್ಘಾಟನೆ ಮಾಡಿ ಅದರ ಲಾಭ ಪಡೆದವರಿಗೆ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಮೊದಲು ನೀವು ಯಾಕೆ ನೈಟ್ ಲ್ಯಾಂಡಿಂಗ್ ಅಳವಡಿಸಿಲ್ಲ. ಸಣ್ಣಪುಟ್ಟ ಕಾಮಗಾರಿಗೆ ಟೆಂಡರ್ ಕಾಯುವಂತಾಗಿದೆ ಎನ್ನುವವರಿಗೆ ರೂಲ್ಸ ನ್ನ ನೀವೇ ಬದಲಿಸಬೇಕಿತ್ತು ಎಂಬ ಆರೋಪವನ್ನೂ ಮಾಡಿದ್ದರು. ಈಗ ಮಾಜಿ ಡಿಸಿಎಂ ಕಿವಿಮಾತು ಹೆಳಿದ್ದನ್ನ ಇಬ್ಬರೂ ಕೇಳ್ತಾರಾ ಅಥವಾ ಆರೋಪ ಪ್ರತ್ಯಾರೋಪದಲ್ಲಿಯೇ ಮುಳುಗಿ ಏರ್ಪೋರ್ಟನ್ನೇ ಮುಳುಗಿಸುತ್ತಾರಾ ಕಾದು ನೋಡಬೇಕಿದೆ.

 Will MPs and ministers listen to the former DCM's statement


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close