SUDDILIVE || HOSANAGARA
ನೀರುಪಾಲಾಗಿದ್ದ ಯುವಕ ಶವವಾಗಿ ಪತ್ತೆ-Body of a young man who was drowned was found
ಹೊಳೆ ದಾಟುವಾಗ ಉಕ್ಕಡ ಮಗುಚಿ ನೀರುಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ.
ಉಕ್ಕಡ ಮಗುಚಿ ಪೂರ್ಣೇಶ್ (22) ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ ಮೃತದೇಹ ಹೊರ ತೆಗೆಯಲಾಗಿದೆ. ಮೃತದೇಹ ಕಂಡು ಪೂರ್ಣೇಶ್ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಹೊಸನಗರ ತಾಲೂಕು ಬಂಟೋಡಿಯಲ್ಲಿ ಉಕ್ಕಡ ಮಗುಚಿ ಪೂರ್ಣೇಶ್ ನಾಪತ್ತೆಯಾಗಿದ್ದರು. ಶರತ್ ಮತ್ತು ರಂಜನ್ ಪಾರಾಗಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಕತ್ತಲಾದ್ದರಿಂದ ಶನಿವಾರ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಬೆಳಗ್ಗೆ ಈಶ್ವರ್ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಈ ಕುರಿತು ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು 40 ಅಡಿ ಆಳದ ನೀರಿನಲ್ಲಿ ಈ ಯುವಕನ ಬಾಡಿ ದೊರೆತಿದೆ. ಇಂದು ಬೆಳಿಗ್ಗೆ 8-30 ರ ಹೊತ್ತಿಗೆ ಆತನ ಮೃತದೇಹ ಪತ್ತೆಯಾಗಿದೆ. ಅರ್ಧಗಂಟೆಯ ಕಾರ್ಯಚರಣೆ ನಡೆಸಲಾಗಿದೆ. ಬೋಉ, ದೋಣಿ ತೆಪ್ಪದಲ್ಲಿ ಸಾಗುವಾಗ ಲೈಫ್ ಜಾಕೆಟ್ ಇಟ್ಟುಕೊಂಡು ಪ್ರಯಾಣಿಸುವಂತೆ ಅವರು ಮನವಿ ಮಾಡಿಕೊಂಡರು.
Body of a young man who was drowned was found