SUDDILIVE || SHIVMOGGA
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಸಿಡಿಸುದ್ರಾ?Will Union Minister Shobha Karandlaje detonate a new bomb?
ಶಿವಮೊಗ್ಗದಲ್ಲಿ ಔರಂಗಜೇಬಿನ ಕತ್ತಿ ಹಾಕಲಾಗಿದೆ ಎಂದು ಕೇಂದ್ರ ರಾಜ್ಯ ಸಚಿವೆ ಶೋಭಾಕರದ್ಲಾಂಜೆ ಹೊಸ ಬಾಂಬ್ ನ್ನ ಸಿಡಿಸಿದ್ದಾರೆ.
ರಾಗಿಗುಡ್ಡದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಅಲ್ಲಿ ಭೇಟಿ ನೀಡಿದ ಸಚಿವರು ಮಾಧ್ಯಮಗಳಿಗೆ ಮಾತನಾಡಿ, ನಾನು ನಿನ್ನೆ ಶಿವಮೊಗ್ಗದಲ್ಲಿ ಸಂಚರಿಸಿರುವೆ. ಯಾರ ಕತ್ತಿ ಹಾಕಲಾಗಿದೆ. ಅದು ಔರಂಗಜೇಬಿನ ಕತ್ತಿ ಹಾಕಲಾಗಿದೆ. ಕತ್ತಿಗೆ ರಕ್ತ ಮೆತ್ತಲಾಗಿದೆ ಅದು ಹಿಂದೂಗಳ ರಕ್ತವಾಗಿದೆ ಎಂದಿದ್ದಾರೆ.
ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ನಾಳೆ ನಡೆಯುವ ಈದ್ ಮೆರವಣಿಗೆಯಲ್ಲಿ ಡೆಕೋರೇಷನ್ ಇನ್ನೂ ಪೂರ್ಣಗೊಳ್ಳದೆ ಇದ್ದು ಇಂದು ರಾತ್ರಿ ಪೂರ್ಣಗೊಳ್ಳಲಿದೆ. ಈ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಸಚಿವರು ಈ ಹಿಂದಿನ ರಾಗಿಗುಡ್ಡದ ವಿಷಯದಲ್ಲಿ ಮಾತನಾಡಿರಬಹುದು ಎಂದು ಶಂಕಿಸಲಾಗಿದೆ.
ಜನ ಮತ್ತು ಹಿಂದೂ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಪ್ರತಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಯೋಜನೆ ಘೋಷಿಸಲಾಗುತ್ತಿದೆ. ಕೇರಳದಲ್ಲಿ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ 10 ಕೋಟಿ ಪರಿಹಾರ ನೀಡಲಾಗುತ್ತಿದೆ. ಅವರಿಗೆ ಕೊಡುವ ಅನುದಾನ ರಾಜ್ಯದ ಶಾಸಕರಿಗೆ ಅನುದಾನವಿಲ್ಲ. ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತಗೊಂಡವರಿಗೆ ರಾಜ್ಯ ಸರ್ಕಾರದಲ್ಲಿ ಅನುದಾನವಿದೆ. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟವರಿಗೆ ಗಾಯಗೊಂಡವರಿಗೆ ಸರ್ಕಾರದ ಬಳಿ ಅನುದಾನವಿಲ್ಲ ಎಂದು ದೂರಿದರು.
ಪೊಲೀಸ್ ಸೂಚಿಸಿದ ಮಾರ್ಗದಲ್ಲಿ ಮದ್ದೂರಿನ ಗಣಪತಿ ಮೆರವಣಿಗೆ ನಡೆದಿದೆ. ಗುಪ್ತಚರ ಇಲಾಖೆಗೆ ಕಲ್ಲುತೂರಾಟದ ಬಗ್ಗೆ ಮಾಹಿತಿಯಿಲ್ಲ. ಹಿಂದೂಗಳ ಮೇಲಿನ ಹಲ್ಲೆ ಕಲ್ಲೂತೂರಾಟ ಸಿಎಂ ಮತ್ತು ಡಿಸಿಎಂನಿಂದ ಆಗುತ್ತಿದೆ. ಚಾಮುಂಡಿ ಬೆಟ್ಟ ಹಿಂದೂಗಳಲ್ಲ ಎಂಬ ಹೇಳಿಕೆ ಈ ಅವಘಡಕ್ಕೆ ಕಾರಣವಾಗಿದೆ. ನಿಮಗೆ ಹಾಸನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ. ಸರ್ಕಾರ ಬಿಟ್ಟುಹೋಗಿ, ಕೇರಳಕ್ಕೆ ವಯನಾಡಿಗೆ ಪರಿಹಾರ ನೀಡಲು ಹಣವಿದೆ ಎಂದರು.
ಇಂದು ಇಂಡಿಯಾ ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. ಸಿಂಧೂರ ನಂತರ ಈ ಪಂದ್ಯಾವಳಿ ಬೇಡ ಎಂಬ ಆಗ್ರಹವಿದೆ. ಈ ಬಗ್ಗೆ ನಮಗೆ ಗೊತ್ತಿಲ್ಲ. ಯಾರು ನಿರ್ಧಾರ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರ 110 ಕೋಟಿಗೆ ಟೆಂಡರ್ ನಿಗದಿಯಾಗಿತ್ತು. ಅದ್ರೆ 60 ಕೋಟಿಗೆ ಕರೆದ ಪರಿಣಾಮವೂ ಕಾಮಗಾರಿ ತಡವಾಗಿದೆ ಎಂದರು.
Will Union Minister Shobha Karandlaje detonate a new bomb?
