ad

ಮಿಲಾದ್ ಮೆರವಣಿಗೆಗೆ ಶಿವಮೊಗ್ಗದಲ್ಲಿ ಮಸ್ತ್ ದೀಪಾಲಂಕಾರ, ರಾರಾಜಿಸಿದ ಟೀಪು, ಖಾಕಿ ಕಟ್ಟೆಚ್ಚರ- Mast decorated with lamps, Tipu lit, khaki alert in Shivamogga for Milad procession

 SUDDILIVE || SHIVAMOGGA

ಮಿಲಾದ್ ಮೆರವಣಿಗೆಗೆ ಶಿವಮೊಗ್ಗದಲ್ಲಿ ಮಸ್ತ್ ದೀಪಾಲಂಕಾರ, ರಾರಾಜಿಸಿದ ಟೀಪು, ಖಾಕಿ ಕಟ್ಟೆಚ್ಚರ-Mast decorated with lamps, Tipu lit, khaki alert in Shivamogga for Milad procession

Tipu, decoration


ಶಿವಮೊಗ್ಗದಲ್ಲಿ ನಾಳೆ ಈದ್ ಮಿಲಾದ್ ಮೆರವಣಿಗೆಗೆ ಅಲಂಕಾರಗಳು ಸಿದ್ದಗೊಂಡಿವೆ. ಟೀಪುನಗರ, ಆರ್ ಎಂಎಲ್ ನಗರ, ಬಾಪೂಜಿ ನಗರ, ಮದಾರಿಪಾಳ್ಯ, ಸೂಳೆಬೈಲು ಮೊದಲಾದ ಬಡಾವಣೆಗಳು ಹಸರೀಕರಣಗೊಂಡಿದೆ. ದೀಪಾಲಂಕಾರಗಳು ರಾರಾಜಿಸಿವೆ.

ಟೀಪೂನಗರದ ಚಾನೆಲ್ ಏರಿಯಾದಲ್ಲಿ ಟೀಪು ರಾರಾಜಿಸಿದ್ದಾನೆ. ಟೀಪು ನಡೆದುಕೊಂಡು ಬರುತ್ತಿರುವ ಪ್ರತಿಮೆಗೆ ಸಾರ್ವಜನಿಕರು ನಿಂತುಕೊಂಡು ನೋಡುವಂತೆ ಕೇಂದ್ರಬಿಂದುವಾಗಿದೆ. ಟೀಪುವಿನ ಕಟೌಟ್ ನೋಡಲು ಜನ ಮುಗಿಬಿದ್ದಿದ್ದಾರೆ. ಟೀಪುನಗರ ಚಾಲನೆಲ್ ನಲ್ಲಿ ಟ್ರಾಫಿಕ್ ಜಾಮ್ ಸಹ ಆಗಾಗ ಸಂಭವಿಸುತ್ತಿದೆ. ಟೀಪುನಗರದ ಗಲ್ಲಿ ಗಲ್ಲಿಗಳು ದೀಪಾಲಂಕಾರಗೊಂಡಿದೆ. 


ಅಮೀರ್ ಅಹಮದ್ ವೃತ್ತದಲ್ಲಿ ಮೆಕ್ಕಾ ಮದೀನದ ಪ್ರತಿಮೆಗಳನ್ನ ರಚಿಸಿ ಸ್ಥಾಪಿಸಲಾಗಿದೆ. ಅಲ್ಲೂ ಸಹ ಪ್ರತಿಮೆಯನ್ನ ಪ್ರತಿಷ್ಠಾಪಿಸಬೇಕಿದೆ. ಸೂಳೆಬೈಲಿನ ದ್ವಾರಬಾಗಿಲಿನಲ್ಲಿ ದೀಪಾಲಂಕಾರ ಮನಸೂರೆಗೊಳ್ಳುವಂತೆ ಮಾಡಿದೆ. ಬಾಪೂಜಿನಗರದಲ್ಲಿ ಎಲ್ ಇಡಿ ಸ್ಕ್ರೀನ್ ಗಳನ್ನ ಅಳವಡಿಸಿ ಟಿಪ್ಪುವಿನ ಚಿತ್ರಗಳು ಬರುವಂತೆ ಮಾಡಲಾಗಿದೆ. 






ಬಾಲಾರಾಜ್ ಅರಸ್ ರಸ್ತೆಯಿಂದ ಮೀನಾಕ್ಷಿಭವನ್ ರಸ್ತೆಯ ವರೆಗೆ ಬಾಪೂಜಿನಗರದಲ್ಲಿ ದೀಪಾಲಾಂಕಾರ ಮಾಡಲಾಗಿದೆ. ಎಲ್ ಇಡಿ ಸ್ಕ್ರೀನ್ ನಲ್ಲಿ ಬಾಪೂಜಿ ನಗರದ ನೌಜವಾನ್ ಎಂಬ ಅಕ್ಷರಗಳಲ್ಲಿ ಡಿಸ್ಪ್ಲೇ ಆಗಲಿವೆ. ಹೀಗೆ ನಗರದಲ್ಲಿ ನಾಳೆ ಈದ್ ಮೆರವಣಿಗೆಗೆ ಶಿವಮೊಗ್ಗ ಸಿದ್ದಗೊಂಡಿದೆ. 

ಪೊಲೀಸರ ರೂಟ್ ಮಾರ್ಚ್



ಈದ್ ಮೆರವಣಿಗೆ ಹಿನ್ನಲೆಯಲ್ಲಿ ಖಾಕಿ ಕಟ್ಟೆಚ್ಚರದಲ್ಲಿದೆ. ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಮತ್ತು ಆರ್ ಎಎಫ್ ತುಕಡಿ, ಸಶಸ್ತ್ರಪಡೆಗಳು ಮತ್ತು ಗೃಹರಕ್ಷಕದಳದ ರೂಟ್ ಮಾರ್ಚ್ ಸಹ ನಡೆದಿದೆ. ಮಿಲಾದ್ ಮೆರವಣಿಗೆಯ ಹಿನ್ನಲೆಯಲ್ಲಿ  03 ಹೆಚ್ಚುವರಿ ಪೊಲೀಸ್  ಅಧೀಕ್ಷಕರು,  17 ಪೊಲೀಸ್  ಉಪಾಧೀಕ್ಷಕರು, 52 ಪೋಲಿಸ್ ನಿರೀಕ್ಷಕರು, 38 ಪೊಲೀಸ್ ಉಪ ನಿರೀಕ್ಷಕರು, 77 ಸಹಾಯಕ ಪೊಲೀಸ್ ನಿರೀಕ್ಷಕರು, 2000 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 1000 ಗೃಹರಕ್ಷಕ ದಳ ಸಿಬ್ಬಂದಿಗಳು, 01 RAF ತುಕಡಿ, 01 SAF ತುಕಡಿ 08 DAR ತುಕಡಿ, 01 QRT ತುಕಡಿ ಮತ್ತು 10 KSRP ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ.

Mast decorated with lamps, Tipu lit, khaki alert in Shivamogga for Milad procession

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close