SUDDILIVE || SHIVAMOGGA
ಸೆ.20 ರಂದು ಗ್ರಂಥ ಲೋಕರ್ಪಣೆ-Book launch on September 20th
ಸೆ.20 ರಂದು ಶನಿವಾರ, 10ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಡಾ. ಸತ್ಯನಾರಾಯಣ ಭಟ್ ಅವರು ರಚಿಸಿರುವ ಸ್ವತಂತ್ರ ಸೇನಾನಿ, ಆಯುರ್ವೇದ ಪಿತಾಮಹರಾದ ಶ್ರೀ ಯಡತೊರೆ ಪಾರ್ಥನಾರಾಯಣ ಪಂಡಿತರ ಜೀವನ ಚರಿತ್ರೆಯ ಗ್ರಂಥ ಲೋಕಾರ್ಪಣೆಯಾಗಲಿದೆ.
ಸರ್ಕಿಟ್ ಹೌಸ್ ಬಳಿಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಭೋಧನಾ ಆಸ್ಪತ್ರೆಯಲ್ಲಿ ಈ ಗ್ರಂಥ ಲೋಕಾರ್ಪಣೆಯಾಗಲಿದ್ದು, ಮುಖ್ಯ ಅತಿಥಿಯಾಗಿ ಶಾಸಕರುಗಳಾದ ಶ್ರೀ ಚನ್ನಬಸಪ್ಪ ಎಸ್ ಎನ್ ಹಾಗು ಶ್ರೀ ಅರುಣ್ ಡಿ ಎಸ್ ಭಾಗವಹಿಸುವರು. ಆಯುರ್ವೇದ ಅಕಾಡೆಮಿಯ ಶ್ರೀ ಅಶ್ವಿನೀ ಕುಮಾರ್ ಪಂಡಿತ್ ಗ್ರಂಥಕರ್ತ ರಾದ ಡಾ. ಸತ್ಯನಾರಾಯಣ ಭಟ್ಟರು ಉಪಸ್ಥತರಿರುವರು. ಕಾರ್ಯಕ್ರಮದ ಅಧ್ಯಕ್ಷತೆ ಸ.ಆ. ವೈ ಕಾಲೇಜಿನ ಪ್ರಾಂಸುಪಾಲರಾದ ಡಾ. ವೀಣ ಎಂ ಎಸ್ ವಹಿಸಿಕೊಂಡಿದ್ದಾರೆ.
ಅದೇ ವಿಶೇಷ ಸಂದರ್ಭದಲ್ಲಿ ದಂತ ವೈದ್ಯ ವಿಶಾರದರಾದ ಡಾ. ವಿವೇಕ್ ಅವರಿಂದ ನೋವು, ರಕ್ತಸ್ರಾವರಹಿತ ಹಲ್ಲು ಕೀಳುವ ಜಲಂಧರ ಯೋಗ ಚಿಕಿತ್ಸಾ ಶಿಬಿರವನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದೆ.
Book launch on September 20th