ad

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಇಂದು ಬಂಜಾರ ಸಮುದಾಯದಿಂದ ಶವಯಾತ್ರೆ-Funeral procession from Banjara community

 SUDDILIVE || SHIVAMOGGA

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಇಂದು ಬಂಜಾರ ಸಮುದಾಯದಿಂದ ಶವಯಾತ್ರೆ-Funeral procession from Banjara community

Banjara, funeral


ಒಳ ಮೀಸಲಾತಿ ವರ್ಗಿಕರಣವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಬಂಜಾರ ಸಮುದಾಯದ ಪ್ರತಿಭಟನೆ ಇಂದಿಗೆ ಮೂರು ದಿನಗಳು ಕಳೆದಿದ್ದು ಮೂರನೇ ದಿನದ ಅಂಗವಾಗಿ ಸಮುದಾಯವೋ ಶವಯಾತ್ರೆಯನ್ನು ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಸೆಪ್ಟೆಂಬರ್ 20ರವರೆಗೆ ವಿವಿಧ ರೀತಿಯ ಪ್ರತಿಭಟನೆ ಹಮ್ಮಿಕೊಂಡಿರುವ ಬಂಜಾರ ಸಮುದಾಯ ಇಂದು ಬೈಕ್ ಹಾಗೂ ಟ್ರ್ಯಾಕ್ಟರ್ ಏರಿ ಹವಯಾತ್ರೆಯನ್ನು ನಡೆಸಿತು. ಮೊದಲನೆಯ ದಿನ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಸಮುದಾಯ ನಿನ್ನೆ ಪತ್ರ ಚಳುವಳಿಯನ್ನು ನಡೆಸಿತ್ತು.

ಶಿವಮೂರ್ತಿ ವೃತ್ತದಿಂದ ಸವಳಂಗ ರಸ್ತೆ ಸವಳಂಗ ರಸ್ತೆಯಿಂದ ಉಷಾ ನರ್ಸಿಂಗ್ ಹೋಮ್ ವೃತ್ತ ಉಷನರ್ಸಿಂಗ್ ಹೋಮ್ ವೃತ್ತದಿಂದ ವಾಪಸ್ ಶಿವಮೂರ್ತಿ ಸರ್ಕಲ್ ಮುಖಾಂತರ ಡಿಸಿ ಕಚೇರಿಯ ವರೆಗೆ ಶವಯಾತ್ರೆ ನಡೆದಿದೆ. ಶಿವಮೂರ್ತಿ ವೃತ್ತದಲ್ಲಿ ಅಣಕು ಶವಪ್ರದರ್ಶನ ಮಾಡಲಾಗಿದೆ.  

ಮಾಜಿ ಶಾಸಕ ಕೆ ಬಿ ಅಶೋಕ್ ನಾಯಕ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ನಾಳೆ ಅರೇ ಬೆತ್ತಲೆ ಮೆರವಣಿಗೆ ಹಾಗೂ ಸೆಪ್ಟೆಂಬರ್ 20ರಂದು ಬೃಹತ್ ಪ್ರತಿಭಟನಾ ಮೆರವಣಿಗೆಯು ಸೈನ್ಸ್ ಮೈದಾನದಿಂದ ಹೊರಟಿ ಬಿ ಎಚ್ ರಸ್ತೆ ಮೂಲಕ ಡಿಸಿ ಕಚೇರಿಗೆ ತಲುಪಲಿದೆ

Funeral procession from Banjara community

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close