ವಿವಾಹ ಬಂಧನಕ್ಕೊಳಪಡಬೇಕಿದ್ದ ವಧು-ವರರು ರಸ್ತೆ ಅಪಘಾತದಲ್ಲಿ ಸಾವು-Bride and groom who were supposed to get married die in road accident

SUDDILIVE || SHIKARIPURA

ವಿವಾಹ ಬಂಧನಕ್ಕೊಳಪಡಬೇಕಿದ್ದ ವಧು-ವರರು ರಸ್ತೆ ಅಪಘಾತದಲ್ಲಿ ಸಾವು-Bride and groom who were supposed to get married die in road accident

Bride, groom

ಕೆಲವೇ ದಿನಗಳಲ್ಲಿ ವಿವಾಹ ಬಂಧನಕ್ಕೆ ಒಳಗಾಗಬೇಕಿದ್ದ ವಧು-ವರ ಅಂಬಾರಗೊಪ್ಪ ಕ್ರಾಸ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಸೊರಬ ತಾಲೂಕು ಗಂಗವಳ್ಳಿ ಗ್ರಾಮದ ಸದಾಶಿವ ಮತ್ತು ಲೀಲಮ್ಮ ಅವರ ಪುತ್ರ ಬಸವನಗೌಡ(30), ಶಿಕಾರಿಪುರ ತಾಲೂಕು ಮತ್ತೀಕೋಟೆ ಗ್ರಾಮದ ಬಸವರಾಜಪ್ಪ ಅವರ ಪುತ್ರಿ ರೇಖಾ(25) ಮೃತಪಟ್ಟವರು.

ಇಬ್ಬರೂ ಮತ್ತೀಕೋಟೆಯಿಂದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಹೊರಟಿದ್ದರು. ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಬೆಳಗ್ಗೆ 8.45ರ ವೇಳೆಗೆ ಎದುರಿನಿಂದ ಬಂದ ಇಕೋ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಕಳೆದ ತಿಂಗಳಷ್ಟೇ ಇವರಿಬ್ಬರ ವಿವಾಹ ನಿಶ್ಚಿಯಿಸಿ ಹಿರಿಯರು ನಿಶ್ಚಿತಾರ್ಥದ ಶಾಸ್ತ್ರವನ್ನೂ ಮಾಡಿದ್ದರು. ವಿವಾಹ ದಿನಾಂಕ ನಿಗದಿಪಡಿಸಿರಲಿಲ್ಲ. ಸತಿ-ಪತಿಯಾಗಬೇಕಿದ್ದ ಜೋಡಿ ವಿಧಿಯಾಟಕ್ಕೆ ಬಲಿಯಾಗಿದೆ. ಇಕೋ ಚಾಲಕನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Bride and groom who were supposed to get married die in road accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close