SUDDILIVE || BHADRAVATHI
ನನ್ನ ಮಾತು ತಿರುಚಲಾಗಿದೆ-ಸಂಗಮೇಶ್ವರ್-My words have been distorted - Sangameshwar
ಭದ್ರಾವತಿಯಲ್ಲಿ ಎಲ್ಲಾ ಹಬ್ಬಗಳು ಶಾಂತಿಯುತವಾಗಿ ನಡೆದುಕೊಂಡು ಬಂದಿದೆ. ನನ್ನ ಮಾತು ಪೂರ್ಣವಾಗಿ ತೋರಿಸಿಲ್ಲ. ಮಾತಿನ ಅರ್ಥ ತಿರುಚಲಾಗಿದೆ.ಈದ್ ಮಿಲಾದ್ ನಲ್ಲಿ ಎಲ್ಲಾ ಧರ್ಮದಲ್ಲಿಯೂ ಹುಟ್ಟುವ ಬಯಕೆ ನ್ನ ವ್ಯಕ್ತಪಡಿಸಿರುವೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು.
ಹಿಂದೂ, ಮುಸ್ಲೀಂ, ಕ್ರೈಸ್ತರಾಗಿ ಅವರ ಧರ್ಮಿಯ ಆಚರಣೆ ಮಾಡಲು ಬಯಕೆ ವ್ಯಕ್ತಪಡಿಸಿದ್ದನ್ನ ಬಿಜೆಪಿ ಜೆಡಿಎಸ್ ತಿರುಚಿ ಕೇವಲ ಮುಸ್ಲೀಂ ಆಗಿ ಹುಟ್ಟುವ ಬಯಕೆ ವ್ಯಕ್ತಪಡಿಸಿದ್ದೇನೆ. ಇವುಗಳನ್ನ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಭದ್ರಾವತಿಯಲ್ಲಿ ಶಾಂತಿ ಹಾಳುಮಾಡುತ್ತಿದ್ದಾರೆ. ಎಲ್ಲಾ ಹಬ್ಬಗಳಿಗೆ ದೇವಸ್ಥಾನಕ್ಕೆ ಲಕ್ಷಾಂತರ ರೂ. ನೀಡಿರುವೆ. ಜನ ಈ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಮತದಾರರ ಆಶೀರ್ವಾದ ಇರುವವರೆಗೂ ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಹಿಂದೂಗಳೆಂದರೆ ಕಾಂಗ್ರೆಸಿಗರು. ಬೂಟಾಟಿಕೆ ಹಿಂದುಗಳ ರೀತಿ ನಡೆದುಕೊಳ್ಳುವವರು ಬಿಜೆಪಿ ಜೆಡಿಎಸ್ ಎಂದು ಆರೋಪಿಸಿದರು.
ಸದನದಲ್ಲೂ ಹಿಂದೂ ಮುಸ್ಲೀಂ ಎಂದು ಬಿಂಬಿಸಿ ಎರಡೂ ಪಕ್ಷಗಳು ಸರ್ವಜನಿಕರ ಹಣವನ್ನ ಹಾಳುಮಾಡುತ್ತಿದ್ದಾರೆ. ಅಪಪ್ರಚಾರಕ್ಕೆ ಕಿವಿ ಕೊಡಬಾರದು. ಒಂದು ವೇಳೆ ನೋವಾಗಿದ್ದರೆ ಕ್ಷಮೆಯಾಚಿಸುವೆ. ಮೊನ್ನೆ ಭದ್ರಾವತಿಯಲ್ಲಿ ಪಾಕ್ ಪರ ಘೋಷಿಸಿದವರಿಗೆ ಬೂಟ್ ನಲ್ಲಿ ಹೊಡೆದು ಒಳಗೆಹಾಕಬೇಕು.
ಮುಸ್ಲೀಂ ಅವರ ಪರ ಹೇಳಿಕೆ ನೀಡಿರುವುದು ಸ್ವಂತ ಹೇಳಿಕೆಯಾಗಿದೆ. ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ಶಾಂತಿಯುತವಾಗಿ ನಡೆಯುತ್ತೆ. ಮತಾಂತರಗೊಳ್ಳುವುದು ನನ್ನ ವೈಯುಕ್ತಿಕ ಯಾರೋ ಹೇಳಿದಂತೆ ಮತಾಂತರಗೊಳ್ಳಲು ಸಾಧ್ಯವಿಲ್ಲ. ಜೆಡಿಎಸ್ ಮತ್ತು ಬಿಜೆಪಿಗೆ ಕೆಲಸವಿಲ್ಲ. ನನ್ನ ಹೇಳಿಕೆಯಿಂದ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದ್ದು ಎಂದು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಜಿಎಸ್ ಟಿ ಹಣ ಕೊಡುವ ಬಗ್ಗೆ, ರೈತರ ಸಾಲ ಮನ್ನ ಬಗ್ಗೆ, ಉದ್ಯೋಗ ಸೃಷ್ಠಿಯ ಬಗ್ಗೆ ಬಿಜೆಪಿಯವರು ಮಾತನಾಡೊಲ್ಲ. ಕೇವಲ ಹಿಂದೂಮುಸ್ಲೀಂ ಎಂದು ಹೇಳಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ವಿಐಎಸ್ಎಲ್ ಅಭಿವೃದ್ಧಿಯಾಗಿಲ್ಲ. ನಾಲ್ಕು ಜನ ಕೇಂದ್ರದ ಮಂತ್ರಿಗಳು ಇಲ್ಲಿಗೆ ಬಂದರೂ ಪುನರ್ ಆರಂಭಗೊಂಡಿಲ್ಲ. ವಿಐಎಸ್ಎಲ್ ನ್ನ ಈಗ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ. ಅದನ್ನ ಸ್ವಾಗತಿಸುತ್ತೇವೆ. ಎಂಪಿಎಂ ಕಾರ್ಖಾನೆಯನ್ನ ಎಲ್ ಅಂಡ್ ಟಿ ಮೂಲಕ ಅಭಿವೃದ್ಧಿ ಮಾಡಲು ಹೊರಟರೆ ಕೇಂದ್ರ ಅರಣ್ಯದ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ ಎಂದು ದೂರಿದರು.
ಎಲ್ಲಾ ಧರ್ಮದಲ್ಲಿಯೂ ಹುಟ್ಟುವಂತೆ ಕೇಳಿರುವೆ ಕೇವಲ ಮುಸ್ಲೀಂ ಆಗಿ ಹುಟ್ಟುವೆ ಎಂದಿಲ್ಲ. ನನ್ನಮಗ ಗಣೇಶನ ಬೆಳವಣಿಗೆಗೆ ಜನ ಆಶೀರ್ವದಿಸಿ ಎಂದಿರುವೆ. ಎಂಪಿ ಎಂಎಲ್ ಸಿ ಎಂಎಲ್ ಎ ಆಗಿರಲಿ ಎಂದು ಕೇಳಿರುವೆ. ಚೆನ್ನಬಸಪ್ಪ ಎಲ್ಲಾ ಕ್ಲಬ್ ನಡೆಸುತ್ತಿದ್ದಾರೆ ಕಣ್ಣು ಯಾಕೆ ಮುಚ್ಚಿತ್ತಿದ್ದಾರೆ ಭದ್ರಾವತಿಗಿಂತ ಶಿವಮೊಗ್ಗದಲ್ಲಿ ಹೆಚ್ಚು ಕಾನೂನು ಬಾಹಿರ ನಡೆಯುತ್ತಿದೆ.
ಭದ್ರಾವತಿ ಯವರು ಬಡಪಾಯಿಗಳು ಶಿವಮೊಗ್ಗದಲ್ಲಿ ಶ್ರೀಮಂತರು ಆಡುವುದು ಹೆಚ್ಚು ಎಂದ ಅವರು ಪುಕ್ಕಟ್ಟೆ ಪ್ರಚಾರ ಸಿಕ್ಕಿದೆ ನಿಮಗೆ ಧನ್ಯವಾದಗಳು ಎಂದರು.
ಸುದ್ದಿಗೋಷ್ಠಿಯಲ್ಲಿ ಗೀತಾ ರಾಜಕುಮಾರ್, ಶಿಮೂಲ್ ನಿರ್ದೇಶಕ ಎಸ್ ಕುಮಾರ್, ಕಾಂಗ್ರೆಸ್ ನ ಪ್ರಚಾರ ಸಮಿತಿ ಮಣಿಶೇಖರ್, ಸಂಚಾಲಕ ಮಂಜುನಾಥ್, ಮಾಜಿ ನಗರಸಭಾ ಅಧ್ಯಕ್ಷ ಬಿಕೆ ಮೋಹನ್, ಮೈಲಾರಪ್ಪ ಉಪಸ್ಥಿತರಿದ್ದರು.
My words have been distorted - Sangameshwar

