SUDDILIVE || SHIVAMOGGA
ದೇಶದಲ್ಲಿ ಹಿಂದೂ ಧರ್ಮದ ಹಬ್ಬಗಳ ಆಚರಣೆಗಳಲ್ಲಿ ಗೊಂದಲವಿಲ್ಲ ರಾಜ್ಯವೊಂದನ್ನ ಬಿಟ್ಟು, ಅದಕ್ಕೆ ಸಿಎಂ ಕಾರಣ-ಬಿವೈವಿ- CM is responsible for that - BYV
ಇಂದಿನಿಂದ ದೇಶದಲ್ಲಿ ಜಿಎಸ್ಟಿ ಸುಧಾರಣೆ ಸುಧಾರಣೆಅಗುತ್ತಿದೆ ಐತಿಹಾಸಿಕ ದಿನವಾಗಿದೆ. ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಿವಮೊಗ್ಗದಲ್ಲೂ ಸಂಭ್ರಮಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಶಿವಮೊಗ್ಗದಲ್ಲಿ ಪಟಾಕಿಸಿಡಿಸಿ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಅವರಿಗೆ ಧನ್ಯವಾದಗಳು ಎಂದರು. ಬಡವರು ವ್ಯಾಪಾರಿ ವಿದ್ಯಾರ್ಥಿಗಳಿಗೆ ಸುಧಾರಣೆಯಿಂದ ಅನುಕೂಲವಾಗಲಿದೆ. ಭಾರತದ ಅಭಿವೃದ್ಧಿ ಗೆ ಸ್ವಾಭಿಲಂಭನೆ ಭಾರತ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದರು.
ಜಿಎಸ್ಟಿ ಸುಧಾರಣೆ ಗೊಂದಲವಿದೆ. ಮುಂದಿನದಿನಗಳಲ್ಲಿ ಇದು ಸರಿಯಾಗಲಿದೆ. ಇದರ ಲಾಭ ದೇಶದ ಜನರಿಗೆ ಲಾಭ ತಲುಪಲಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ವಿರೋಧ ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಮಾಡಲಿದ್ದೇವೆ ಎಂದರು.
ರಾಜ್ಯ ಜಾತಿ ಗಣತಿ ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲು ಏರಿದೆ. ಸಮಾಜದ ಒಡೆಯಲು ರಾಜ್ಯ ಸರ್ಕಾರ ಕೈಹಾಕಿರುವುದು ದುರ್ದೈವ, ಹಿಂದೂ ಸಮಾಜ ಜಾಗೃತಿಯಾಗಬೇಕು. ರಾಜ್ಯಕ್ಕೆ ಜಾತಿ ಗಣತಿಯ ಬಗ್ಗೆ ಅಧಿಕಾರರವಿಲ್ಲದಿದ್ದರೂ ಜಾತಿಗಣತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಭಾನು ಮುಷ್ತಾಕ್ ದಸರಾ ಉದ್ಘಾಟನೆ ಕುರಿತು ಚರ್ಚೆ ಆಗಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಏನಾಗಿದೆ ಎಂಬುದು ಮುಖ್ಯವಲ್ಲ. ಸಿಎಂಗೆ ಉದ್ಘಾಟನೆ ಮಾಡಿಸಬೇಕೆಂಬ ಹುಂಬತನವಿರುವುದು ಮುಖ್ಯವಾಗಿದೆ. ದೇಶದ ಯಾವುದೇ ಹಿಂದೂಗಳ ಆಚರಣೆ ವಿಚಾರದಲ್ಲಿ ಗೊಂದಲವಿಲ್ಲ. ಆದರೆ ರಾಜ್ಯದಲ್ಲಿ ಆಗ್ತಾಯಿದೆ. ಸಿಎಂ ಅವರೇ ಈ ಗೊಂದಲಕ್ಕೆ ಕಾರಣ ಎಂದರು.
CM is responsible for that - BYV
