SUDDILIVE | | SHIVAMOGGA
ಕಾಂಗ್ರೆಸ್ ನಿಂದ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನ-Congress launches 'Vote Chor Gaddi Chod' campaign
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಇಂದು ಬಸ್ ನಿಲ್ದಾಣದಲ್ಲಿ ವೋಟ್ ಚೋರ್ ಗದ್ದಿ ಚೋಡ್ ಎಂಬ ಅಭಿಯಾನ ನಡೆಸಿದೆ. ಮತಗಳ್ಳತನದಿಂದ ಅಧಿಕಾರ ಹಿಡಿದಿದ್ದೀರಿ ಅಧಿಕಾರ ಬಿಡಿ ಎಂಬ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಧುಬಂಗಾರಪ್ಪ, ಜಾತಿಗಣತಿಗೆ 1.60 ಲಕ್ಷಶಿಕ್ಷಕರನ್ನ ಬಳಸಿಕೊಳ್ಳಲಾಗಿದೆ. ಕೇಂದ್ರ ಗ್ಯಾರೆಂಟಿಯನ್ನ ಕದ್ದರು, ಸಮೀಕ್ಷೆಯನ್ನ ಕದ್ದರು, ಮತವನ್ನೂ ಕದ್ದು ಗದ್ದಿಗೆ ಏರಿದ್ದಾರೆ. ರಾಹುಲ್ ಗಾಂಧಿ ಅವರು ಜನರ ಪರವಾಗಿ ಮತಗಳ್ಳತನದ ವಿರುದ್ಧ ಮಾಹಿತಿ ನೀಡುತ್ತಿದ್ದಾರೆ. ಇದನ್ನ ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರು. ನಂತರ ಸಹಿ ಸಂಗ್ರಹದ ಅಭಿಯಾನದಲ್ಲಿ ಪಾಲ್ಗೊಂಡ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಹಿ ಹಾಕಿದರು. ಸಹಿ ಹಾಕಿದ ಪುಸ್ತಕವನ್ನ ಚುನಾವಣೆ ಆಯೋಗಕ್ಕೆ ಕಳುಹಿಸುವುದಾಗಿ ಹೇಳಿದರು.
ಬಿಜೆಪಿ ಜನತಂತ್ರದ ವಿರುದ್ಧನೇ ನಡೆದುಕೊಂಡು ಬಂದಿದ್ದಾರೆ. ಭಾರತವನ್ನ ಸೇರಿಸುವ ಭಾರತ ಜೋಡೋ ಮೂಲಕ ಮತ್ತು ಮತಗಳ್ಳತನವನ್ನ ಮಾಡಿದ ಬಿಜೆಪಿ ವಿರುದ್ಧ ಜನರಿಗೆ ಮಾಹಿತಿ ಕೊಡುತ್ತಿದ್ದಾರೆ. ಜಾತಿ ಮತ್ತು ಧರ್ಮದ ನಡುವೆ ಕಂದಕ ಸೃಷ್ಠಿಸಲಾಗುತ್ತಿದೆಯೆ ಹೊರತು ರಾಹುಲ್ ಗಾಂಧಿಯ ಪ್ರಶ್ನೆಗೆ ಬಿಜೆಪಿ ಉತ್ತರಿಸುತ್ತಿಲ್ಲ. ಸಾಕ್ಷಿ ನೀಡುತ್ತಿಲ್ಲ ಎಂದು ದೂರಿದರು.
ಆಯನೂರು ಮಂಜುನಾಥ್ ಮಾತನಾಡಿ ಚುನಾವಣೆ ಆಯೋಗ ಕೇಂದ್ರ ದ ರಕ್ಷಣೆ ಮಾಡುತ್ತಿದೆ. ಆಯೋಗ ಸಾಕ್ಷಿ ಕೇಳುತ್ತಿದೆ ಆದರೆ ಸದನದಲ್ಲಿ ಮಾತುಕತೆ ನಡೆದಿದೆ ಎಂದರು. ಹೆಚ್ ಸಿ ಯೋಗೀಶ್ ಮಾತನಾಡಿ, 2014 ರಿಂದ ಜನ್ಮಪ್ರಮಾಣ ಪತ್ರ ಸಿಕ್ತು, ಅಲ್ಲಿಯ ತನಕ ಕಾಂಗ್ರೆಸ್ ಅಭಿವೃದ್ದದಿ ಮಾಡಿದೆ. ಪೆಟ್ರೋಲ್ ದಿನಸಿ ಮತ್ತು ಜನಗಳಲ್ಲಿ ತಪ್ಪು ಅಭಿಪ್ರಾಯ ಮಾಡಿದರು. ಕಾಂಗ್ರೆಸ್ ಮನೆಯಮೇಲೆ ಕಲ್ಲು ಹೊಡೆಯುವ ಕೆಲಸ ಮಾಡಿದ್ದು ಬಿಜೆಪಿ ಎಂದು ದೂರಿದರು.
Congress launches 'Vote Chor Gaddi Chod' campaign
