ಜಿಎಸ್ ಟಿ ಸ್ಲ್ಯಾಬ್ ಇಳಿಕೆ-ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಸಿಹಿ ಹಂಚಿಕೆ- GST slab reduction - BJP state president distributes sweets in the city

 SUDDILIVE || SHIVAMOGGA

ಜಿಎಸ್ ಟಿ ಸ್ಲ್ಯಾಬ್ ಇಳಿಕೆ-ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಸಿಹಿ ಹಂಚಿಕೆ-GST slab reduction - BJP state president distributes sweets in the city

Gst, celebration



ಇಂದಿನಿಂದ ದೇಶದಲ್ಲಿ GST 2.0 ಐತಿಹಾಸಿಕ ಸುಧಾರಣೆ ಮಾಡಿದ ಪ್ರಧಾನಿ ಮೋದಿಗೆ ಜಿಲ್ಲಾ ಬಿಜೆಪಿ ನಗರದ ಶಿವಪಪ್ಪ ನಾಯಕ ವೃತ್ತದಲ್ಲಿ ಧನ್ಯವಾದಗಳನ್ನ ತಿಳಿಸಿದೆ. ಈ ವೇಳೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಸಹ ಪಾಲ್ಗೊಂಡಿದೆ. 

 ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ, ಇಂದು ಐತಿಹಾಸಿಕ ದಿನ, ಭಾರತಕ್ಕೆ ಅಮೇರಿಕಾ ದೊಡ್ಡಸವಾಲನ್ನ ಹಾಕಿದಾಗ ಪ್ರಧಾನಿ ಮೋದಿ ಯಾವುದಕ್ಕೂಜಗ್ಗಲಿಲ್ಲ ಎದೆಗಾರಿಕೆ ತೋರಿದರು. ಕಾಂಗ್ರೆಸ್ ಅಧಿಕಾರಕ್ಕಾಗಿ ಗರೀಬಿ ಹಟಾವ್ ಎಂದು ಚುನಾವಣೆ ಗೆದ್ದಿದ್ದಾರೆ. ಆದರೆ ಸುಧಾರಣೆ ಆಗಿಲ್ಲ ಎಂದು ದೂರಿದರು.

ಸ್ವಾಲಂಭಿ ಮತ್ತು ಸಂಮೃದ್ಧಿ ಭಾರತವಾಗಬೇಕು. ಜಾಗತಿಕ ಸವಾಲನ್ನ ಎದುರಿಸಬೇಕು, 2047 ರಲ್ಲಿ ಅಭಿವೃದ್ಧಿ ಶೀಲ ಭಾರತವಾಗಬೇಕು ಎಂಬ ಕಲ್ಪನೆಯೊಂದಿಗೆ ಮೋದಿ ಹೊರಟಿದ್ದಾರೆ. ಜಾಗತಿಕ ಸವಾಲನಿನ ನಡುವೆ ಜಿಎಸ್ ಟಿ ಸುಧಾರಣೆ ಮಾಡಲಾಗಿದೆ. ಬಡವರು, ಮಧ್ಯಮ ಮತ್ತು ಉದ್ದಿಮೆ ವರ್ಗದವರಿಗೆ 12 ಮತ್ತು 5 ಪರ್ಸೆಂಟ್ ಜಿಎಸ್ ಟಿ ಇಟ್ಟುಕೊಂಡು ಉಳಿದೆ ಎರಡು ಸ್ಲಾಬ್ ಗಳನ್ನ ತೆಗೆಯಲಾಗಿದೆ ಎಂದರು. 

ಜಿಎಸ್ಟಿ ಸಮಿತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕೆಂದರೆ ಎಲ್ಲಾ ರಾಜ್ಯದ ಹಣಕಾಸು ಸಚಿವರ ತೀರ್ಮಾನ ಮುಖ್ಯವಾಗಿದೆ.  ಜಿಎಸ್ಟಿ ಕೌನ್ಸಿಲ್ ನಲ್ಲಿ ಯಾರಾದರೂಆಕ್ಷೇಪಿಸಿದರೆ ಅದು ಜಾರಿಯಾಗಲ್ಲ. ಆದರೆ ಕಾಂಗ್ರೆಸ್ ಇದನ್ನ ರಾಜಕೀಯ ವಾಗಿ ಬಳಕೆ ಮಾಡಲು ಯತ್ನಿಸಿತು ಎಂದರು.


ರಾಜ್ಯಾಧ್ಯಕ್ಷರ ಭಾಷಣದ ನಂತರ ಸಿಹಿ ಹಂಚಲಾಯಿತು ಮತ್ತು ಪಟಾಕಿಯನ್ನ ಸಿಡಿಸಿ ಸಂಭ್ರಮಿಸಲಾಯಿತು. ನಂತರ ಖುದ್ದರು ರಾಜ್ಯಾಧ್ಯಕ್ಷರೆ ಅಂಗಡಿಗಳಿಗೆ ತೆರಳಿ ಸಿಹಿ ಹಂಚಿದ್ದು ವಿಶೇಷವಾಗಿತ್ತು. 

ಈ ವೇಳೆ ಎಂಎಲ್ ಸಿ ಧನಂಜಯ ಸರ್ಜಿ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಅಧ್ಯಕಗಷ ಜಗದೀಶ್, ಮೋಹನ ರೆಡ್ಡಿ, ಮಾಲ್ತೇಶ್ ಹರೀಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. 

GST slab reduction - BJP state president distributes sweets in the city

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close