SUDDILIVE || SHIVAMOGGA
ಚೆನ್ನಯ್ಯ ಶಿವಮೊಗ್ಗಕ್ಕೆ ಶಿಫ್ಟ್-Chennaiyya shifts to Shimoga
ಧರ್ಮಸ್ಥಳ ಕ್ಷೇತ್ರದಲ್ಲಿ ಶವಗಳನ್ನ ಹೂತಿಟ್ಟ ವಿಚಾರದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿ ಚೆನ್ನಯ್ಯನನ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬೆಳ್ತಂಗಡಿ JMFC ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ 1:20 ಕ್ಕೆ ಶಿವಮೊಗ್ಗ ಜೈಲಿಗೆ ಚಿನ್ನಯ್ಯ ಶಿಫ್ಟ್ ಮಾಡಲಾಗಿದೆ. ಇಂದಿನಿಂದ ಕಾವೇರಿ ಬ್ಯಾರೆಕ್ ನಲ್ಲಿ ಚಿನ್ನಯ್ಯ ನನ್ನ ಇರಿಸಲಾಗಿದೆ.
ಭದ್ರತೆ ದೃಷ್ಟಿಯಿಂದ ಹೈಟೆಕ್ ಜೈಲು ಆಗಿರುವ ಶಿವಮೊಗ್ಗ ಜೈಲಿಗೆ ರವಾನಿಸಲಾಗಿದೆ. ಮೊದಲು ಕಾವೇರಿ ಬ್ಯಾರೆಕ್ ನಲ್ಲಿ ಕೆಲ ದಿನ ಉಳಿಯಲಿರುವ ಚಿನ್ನಯ್ಯನ ನಡುವಳಿಕೆ ನೋಡಿಕೊಂಡು ಬೇರೆ ಬ್ಯಾರಕ್ ಗೆ ಚಿನ್ನಯ್ಯ ನನ್ನ ಬೇರೆ ಬ್ಯಾರಕ್ ಗೆ ರವಾನಿಸಲಾಗುವುದು. ಶಿವಮೊಗ್ಗ ಜೈಲಿನಲ್ಲಿ ಸಧ್ಯಕ್ಕೆ 850 ಕ್ಕೂ ಹೆಚ್ಚು ಕೈದಿಗಳು ಇರುವುದಾಗಿ ತಿಳಿದು ಬಂದಿದೆ.
Chennaiyya shifts to Shimoga
