SUDDILIVE || SHIVAMOGGA
ಮಹಾವೀರ ವೃತ್ತದ ಬಳಿ ಕಾರು ಮತ್ತು ಖಾಸಗಿ ಬಸ್ ಡಿಕ್ಕಿ-Car and private bus collide near Mahaveer Circle
ಬೆಳ್ಳಂಬೆಳಿಗ್ಗೆ ಮಹಾವೀರ ವೃತ್ತದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದಿದ್ದರೂ ಕಾರಿನ ಹಿಂಭಾಗ ಜಖಂಗೊಂಡಿದೆ.
ಗಾಜನೂರಿನಿಂದ ಮಗನನ್ನ ಬೆಂಗಳೂರಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ಕುಟುಂಬವೊಂದು ವ್ಯಾಗನಾರ್ ಕಾರಿಗೆ ತೆರಳುತ್ತಿದ್ದ ವೇಳೆ ಬೆಂಗಳೂರಿನಿಂದ ಸೊರಬ ಮೂಲಕ ಸಿದ್ದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.
ಆದರೆ ವ್ಯಾಗನರ್ ಕಾರಿನ ಹಿಂಭಾಗದ ಇಂಡಿಕೇಟರ್, ಹಿಂಭಾಗ ಡೋರಿನ ಗ್ಲಾಜುಗಳು ಪುಡಿಪುಡಿಯಾಗಿವೆ. ಹಿಂಭಾಗದಲ್ಲಿ ಕಾರು ಡೆಂಟಾಗಿವೆ. ಘಟನೆ ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಮಹಾವೀರ ವೃತ್ತದ ಬಳಿ ಬೆಳಗಿನ ಜಾವ ಅದರಲ್ಲೂ ರೈಲು ಹೊರಡುವ ಸಮಯದಲ್ಲಿ ಅಪಘಾತಗಳು ಹೆಚ್ಚಾಗಿವೆ. ವೃತ್ತದ ಬಳಿ ಸಿಗ್ನಲ್ ಗಳಿದ್ದರೂ ಅವುಗಳು ಬೆಳಿಗ್ಗೆ 6-30 ರ ನಂತರ ಕಾರ್ಯನಿರ್ವಹಿಸುವುದರಿಂದ ಬೆಳಗಿನ ಜಾವ ರೈಲಿಗೆ ಹೋಗುವ ಪ್ರಯಾಣಿಕರಿಗೆ, ಆಟೋಗಳಿಗೆ ಅಪಘಾತ ಹೆಚ್ಚಾಗಿವೆ.
Car and private bus collide near Mahaveer Circle
