SUDDILIVE || SHIVAMOGGA
ಪಾಲಿಕೆಯಲ್ಲಿ ಚಾಮುಂಡೇಶ್ವರಿಗೆ ಪೂಜೆ-Worship of Chamundeshwari in the municipality
ಶಿವಮೊಗ್ಗದ ವೈಭವದ ದಸರಾಗೆ ಚಾಲನೆ ನೀಡಲಾಗಿದೆ. ನಿವೃತ್ತ ಸೇನಾಧಿಕಾರಿ ಸೋಮಶೇಖರ್ ರಾಜು ಅವರಿಂದ ಚಾಲನೆ ದೊರೆಯಲಿದ್ದು ಇದೀಗ ಪಾಲಿಕೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕೋಟೆ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತಿದೆ.
ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದಸರಾಗೆ ಚಾಲನೆ ದೊರೆಯಲಾಗಿದೆ ವೃಶ್ಚಿಕ ಲಗ್ನದಲ್ಲಿ ಉತ್ಸವ ಮೂರ್ತಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ. ದೇವಾಲದಲ್ಲಿ 10 ದಿನಗಳ ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಈ ವೇಳೆ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ, ಮಹಾನಗರದ ಆಯುಕ್ತ ಮಾಯಣ್ಣಗೌಡ, ಮಾಜಿ ಕಾರ್ಪರೇಟರ್ ಗಳು ಮತ್ತು ಹಾಲಿ ಅಧಿಕಾರಿಗಳು ಮತ್ತು ಪಾಲಿಕೆ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
Worship of Chamundeshwari in the municipality
