SUDDILIVE || BHADRAVATHI
ಲವ್ ಗೆ ಕುಟುಂಬಸ್ಥರಿಂದ ತಿಳಿ ಹೇಳಿಕೆ-ಚಾನೆಲ್ ಗೆ ಹಾರಿದ ಜೋಡಿಗಳು-ಯುವತಿ ನೀರುಪಾಲು-Love's family's statement - Couples jumped into the channel - Yuvati Neerupalu
ಲವ್ ವಿಚಾರಕ್ಕೆ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು ಯುವತಿ ನೀರುಪಾಲಾಗಿದ್ದರೆ ಯುವಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಯುವತಿಗಾಗಿ ಎರಡು ದಿನಗಳಿಂದ ಅಗ್ನಿಶಾಮಕ ದಳದ ತಂಡ ಹುಡುಕುತ್ತಿದ್ದು, ಇದುವರೆಗೆ ಯಾವುದೇ ಕುರುಹು ಸಿಕ್ಕಿಲ್ಲ.
ಕಳೆದ ಮೂರು ವರ್ಷದಿಂದ ಭದ್ರಾವತಿಯ ಅಂತರಗಂಗೆ ಭೋವಿ ಕಾಲೋನಿಯ ನಿವಾಸಿಗಳಾದ ಸ್ವಾತಿ (19) ಮತ್ತು ಯುವಕ ಸೂರ್ಯ (20) ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಗೆ ಮನೆಯವರು ನಿನ್ನೆ ಬುದ್ದಿವಾದ ಹೇಳಿದ್ದಾರೆ. ಅಷ್ಟೇ ಬುದ್ದಿವಾದ ಕೇಳದ ಜೋಡಿ ಹಕ್ಕಿಗಳು ಇರುವೆ ಪುಡಿ ಸೇವಿಸಿ ಇಬ್ಬರು ಅಂತರಗಂಗೆ ಉಕ್ಕುಂದದಲ್ಲಿರುವ ಚಾನೆಲ್ ಗೆ ಹಾರಿದ್ದಾರೆ.
ಯುವತಿ ನೀರುಪಾಲಾಗಿದ್ದಾಳೆ. ಯುವಕ ಮರದ ಸಹಾಯದಿಂದ ಮೇಲೆ ಬಂದು ಮೆಗ್ಗಾನ್ ಗೆ ದಾಖಲಾಗಿದ್ದಾನೆ. ಯುವತಿ ಸ್ವಾತಿಗಾಗಿ ತೀವ್ರ ಹುಡುಕಾಟನಡೆಸಿದರೂ ಆಕೆಯ ಕುರುಹು ಸಿಕ್ಕಿಲ್ಲ. ಇದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಯುವಕ ಸೂರ್ಯ ಮತ್ತು ಸ್ವಾತಿ ಮನೆ ನೆರೆಹೊರೆಯರಾಗಿದ್ದಾರೆ. ಸ್ವಾತಿ ಪ್ರಥಮ ಪದವಿಯಲ್ಲಿ ಅಭ್ಯಾಸಿಸುತ್ತಿದ್ದರೆ ಯುವಕ ಸೂರ್ಯ ಕೆಲಸಕ್ಕೆ ಹೋಗುತ್ತಿದ್ದನು. ಇಬ್ಬರ ನಡುವೆ ಪ್ರೀತಿಗೆ ಮನೆಯವರು ತಿಳಿ ಹೇಳಿದ್ದಕ್ಕೆ ಮನನೊಂದ ಜೋಡಿಗಳು ಇಂತಹ ದುರ್ಘಟನೆಗೆ ಕೈಹಾಕಿದ್ದಾರೆ. ಘಟನೆ ಭದ್ರಾವತಿ ಗ್ರಾಮಾಂತರ ಪೊಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
Couples jumped into the channel - Yuvati Neerupalu
