SUDDILIVE || SHIVAMOGGA
ಜಾತಿ ಸಮೀಕ್ಷೆಗೆ ಇಂದಿನಿಂದ ಚಾಲನೆ, ಹಿಡಿಶಾಪಹಾಕುತ್ತಿರುವ ಶಿಕ್ಷಕರು-Caste survey launched, teachers cursing
ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಶಿಕ್ಷಕರು ಈ ಸಮೀಕ್ಷೆಯಲ್ಲಿ ಬಳಕೆಯಾಗುತ್ತಿದ್ದು ಅಲ್ಲಿ ಇಲ್ಲಿ ಅವ್ಯವಸ್ಥೆಗಳಲ್ಲಿ ಕೇಳಿ ಬರುತ್ತಿದೆ.
ಜಾತಿ ಗಣತಿಯನ್ನ ನಗರ, ತಾಲೂಕಿನಲ್ಲಿ ಮತ್ತು ಜಿಲ್ಲೆಯಾದೈಂತ ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 3842 ಜನ ಶಿಕ್ಷಕರನ್ನ ಬಳಸಿಕೊಳ್ಳಲಾಗಿದೆ. ತಾಲೂಕಿನಲ್ಲಿ 1261 ಶಿಕ್ಷರನ್ನ ನಿಯೋಜಿಸಲಾಗಿದೆ ಶಿವಮೊಗ್ಗ ನಗರ ಮತ್ತು ತಾಲೂಕಿಗೆ 1530 ಶಿಕ್ಷರ ಅಗತ್ಯವಿದ್ದು 169 ಜನ ಶಿಕ್ಷಕರ ಕೊರತೆಯೂ ಕಾಣುತ್ತಿದೆ.
ಆರೋಪ
ಸಮೀಕ್ಷೆಯ ಸರಿಯಾದ ಮಾಹಿತಿಯನ್ನು ನೀಡುವಲ್ಲಿ ಸರ್ಕಾರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪ ಎಲ್ಲೆಡೆ ಗಂಭೀರವಾಗಿ ಕೇಳಿ ಬಂದಿದೆ. ಅದಕೆ ಸಾಕ್ಷಿ ಎಂಬಂತೆ ಕಿಟ್ ಗಾಗಿ ಶಿಕ್ಷಕರು ಇಂದು ಅನುಭವಿಸಿದ ಕಥೆಯೇ ಸಾಕ್ಷಿಯಾಗಿದೆ.
ನಾಳೆ ಬೆಳಗ್ಗೆ 9:00ಗೆ ನೀವು ಶಿಕ್ಷಣ ಇಲಾಖೆಯ ಬಿಆರ್ ಸಿ ಕಚೇರಿ ಬಳಿ ಬನ್ನಿ. ನಿಮ್ಮ ಕಿಟ್ ಪಡೆದು ನಾಳೆಯಿಂದಲೇ ಸಮೀಕ್ಷೆ ಆರಂಭಿಸಬೇಕು ಎಂದು ಏಕಏಕಿ ನಿನ್ನೆ ಸಂಜೆ ಘೋಷಿಸಿದ ಹಿಂದುಳಿದ ವರ್ಗಗಳ ಇಲಾಖೆ ಅದಕೆ ಪೂರಕ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆ ಇಲಾಖೆಯ ಮಹಾನ್ ಬುದ್ಧಿವಂತರು ಒಂದೇ ಬಾರಿಗೆ 1200 ಕ್ಕೂ ಹೆಚ್ಚು ಶಿಕ್ಷಕರಿಗೆ ಹೇಗೆ ತಾನೇ ಕಿಟ್ ವಿತರಿಸಲು ಸಾಧ್ಯ ಎಂಬುದನ್ನು ಯೋಚಿಸಲಿಲ್ಲ, ಶಿಕ್ಷಕರನ್ನ ಕಾಲ ಕಸಕ್ಕಿಂತ ಕಡೆಯಾಗಿ ಕಂಡಿರುವ ಆರೋಪ ಕೇಳಿ ಬಂದಿದೆ.
ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಅವಕಾಶವನ್ನು ಬಳಸಿಕೊಂಡು ಪ್ಲೇ ಗೂಗಲ್ ಸ್ಟೋರ್ ಮೂಲಕ ಸಮೀಕ್ಷೆಯ ಆಂಡ್ರಾಯ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡು ಆರಂಭಿಸಿ ಎಂದು ಲಿಂಕ್ ಒಂದನ್ನು ಅಧಿಕಾರಿಗಳು ಕಳುಹಿಸಿದ್ದು, ಇದರಿಂದ ಶಿಕ್ಷಕರು ಪರದಾಡಿರುವುದು ಕೇಳಿ ಬಂದಿದೆ.
ತರಬೇತಿ ನೀಡುವ ಸಮಯದಲ್ಲಿ ಕರೆಂಟ್ ಹೋದಾಗ ಮಾಹಿತಿಯನ್ನು ಸರಿಯಾಗಿ ಕೊಡದೆ ನುಣಚಿಕೊಂಡಿದ್ದ ಅಧಿಕಾರಿಗಳು ಈಗ ಏಕಾಏಕೀ ಹಾವೂ ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಜಾಣ ಹೆಜ್ಜೆಯನ್ನಿಡುತ್ತಿರುವುದಾಗಿ ಆರೋಪ ಮಾಡಲಾಗಿದೆ. ಶಿಕ್ಷಕರು ಸಾಕಷ್ಟು ಆಕ್ರೋಶಕ್ಕೆ ಒಳಗಾಗಿದ್ದಾರೆ.
ಡಿ ಗ್ರೂಪ್ ನೌಕರರಿಗೆ ಹೇಳುವಂತೆ ಶಿಕ್ಷಕರಿಗೆ ಏಕಾಏಕಿ ದಿಡೀರ್ ದಿಢೀರ್ ಆದೇಶ ನೀಡುವ ಇಲಾಖೆ ಅಧಿಕಾರಿಗಳಿಗೆ ಈ ಸಮೀಕ್ಷೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂಬುದು ಆರೋಪಗಳಲ್ಲಿ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಆರೋಪ ಸರಿಯಾಗಲಿದೆಯಾ ಕಾದುನೋಡಬೇಕಿದೆ
Caste survey launched, teachers cursing
