SUDDILIVE || BHADRAVATHI
ಭದ್ರಾವತಿಯ ಶಂಕರಘಟ್ಟದ ಬಳಿ ಕಾರು ಪಲ್ಟಿ-Car overturns near Shankar Ghat in Bhadravati
ಭದ್ರಾವತಿಯ ಶಂಕರಘಟ್ಟದ ಬಳಿ ಕಾರೊಂದು ಪಲ್ಟಿಹೊಡೆದಿದ್ದು ವಾಹನವನ್ನ ಚಲಾಯಿಸುತ್ತಿದ್ದ ಯುವಕನಿಗೆ ತೀವ್ರಗಾಯಗಳಾಗಿವೆ.
ಶಂಕರಘಟ್ಟದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರು ರಸ್ತೆಯ ಬಳಿ ತೋಡಿದ್ದ ಟ್ರಂಚ್ ಗೆ ಬಿದ್ದಿದೆ. ಈ ಘಟನೆ ನಡೆದಿರುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಕಾರನ್ನ ಚಲಿಸುತ್ತಿದ್ದ ಶರತ್ ಎಂಬ (27) ವರ್ಷದ ಯುವಕನಿಗೆ ತೀವ್ರ ಗಾಯವಾಗಿದ್ದು ಮೆಗ್ಗಾನ್ ಗೆ ಕರೆದೊಯ್ಯಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಶರತ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಜೊತೆ ಯುವತಿಯೋರ್ವಳು ಸಹ ಇದ್ದು ಆಕೆಗೆ ಸಣ್ಣಪುಟ್ಟ ಗಾಯಗಳಾಗಿರಬಹುದು ಎನ್ನಲಾಗಿದೆ. ಇಬ್ಬರೂ ಸಾಗರದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಾಹನ ಸ್ವಿಫ್ಟ್ ಡಿಸೈರ್ ಎಂದು ಶಂಕಿಸಲಾಗಿದೆ.
Car overturns near Shankar Ghat in Bhadravati
