ದಸರಾ ಎಂದರೆ ಅನ್ಯಾಯದ ವಿರುದ್ಧ ನ್ಯಾಯದ ಗೆಲವು-ಬಗ್ಗವಳ್ಳಿ ಸೋಮಶೇಖರ್ ರಾಜು-Dasara means the victory of justice over injustice-Baggavalli Somashekar Raju

 SUDDILIVE || SHIVAMOGGA

ದಸರಾ ಎಂದರೆ ಅನ್ಯಾಯದ ವಿರುದ್ಧ ನ್ಯಾಯದ ಗೆಲವು-ಬಗ್ಗವಳ್ಳಿ ಸೋಮಶೇಖರ್ ರಾಜು-Dasara means the victory of justice over injustice-Baggavalli Somashekar Raju   

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಕೋಟೆ ರಸ್ತೆಯಲ್ಲಿರುವ ಚಂಡಿಕಾ ದುರ್ಗಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆ ಮೂಲಕ ಕರೆತಂದು ಪ್ರತಿಷ್ಠಾಪಿಸಲಾಗಿದೆ. 

ಇಲ್ಲಿ ದಸರಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದ ನಿವೃತ್ತ ಸೇನಾಧಿಕಾರಿ ಬಗ್ಗವಳ್ಳಿ ಸೋಮಶೇಖರ್  ರಾಜು ಮಾತನಾಡಿದ ಭಾರತದ ಸೇನೆ ಮತ್ತು ವಾಯುಪಡೆ ಯುದ್ಧಕ್ಕೆ ಹೋಗಲ್ಲ. ಯಾವಾಗ ದೇಶ ಸೇನೆ ಹಿಂದೆ ಇರುತ್ತದೆ ಅಲ್ಲಿ ಜಯ ಸಿಗಲಿದೆ. ಆಪರೇಷನ್ ಸಿಂಧೂರ ಯಶಸ್ವಿಯಾಗಿದ್ದೆ ಅದಕ್ಕೆ ಎಂದು ತಿಳಿಸಿದರು.

39 ವರ್ಷ ಮಿಲ್ಟ್ರಿ ಸೇವೆ ಸಲ್ಲಿಸಿದ್ದೇನೆ. ಮೊದಲ ಸೇವೆ ಲೇಲಡಾಕ್ ನಲ್ಲಿ ಆಗಿತ್ತು. ಅಲ್ಲಿ -30 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಕೆಲಸ ಮಾಡಿರುವೆ. ಅದೇ ತರ +50 ಡಿಗ್ರಿ ಸೆಂಟಿಗ್ರೇಡ್ ವಾತಾವರಣವನ್ನೂ ನಾನು ನೋಡಿದ್ದೇನೆ. ಇಂತಹ ಸಂಭ್ರಮದಲ್ಲಿಯೂ ಸೇನೆ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸುತ್ತದೆ ಎಂದರು.


ದಸರಾ ಎಂದರೆ ಧರ್ಮದ ಜಯ,  ಮಹಿಷಾಸುರ ಮರ್ದನಿ, ರಾಮ ರಾವಣರ ಕಥೆ ಈ ದಸರಾ ವೇಳೆ ಪ್ರಸ್ತುತಗೊಳ್ಳಲಿದೆ. ಈ ಕಥೆಗಳ ಅರ್ಥ ಇಷ್ಟೆ, ಅನ್ಯಾಯ ಎಷ್ಟೇ ಬಲಿಷ್ಠವಾದರೂ ಸತ್ಯದ ಮುಂದೆ ಸೋಲಲೇ ಬೇಕು. ಹಬ್ಬ ನಮ್ಮನ್ನ ಒಟ್ಟುಗೂಡಿಸುತ್ತದೆ. ಹಬ್ಬ ಪಾಠಕಲಿಸುವ ಶಾಲೆ ಅಲ್ಲಿ ಸಾಂಸ್ಖೃತಿಕ ಕಾರ್ಯಕ್ರಮಗಳು ಶಿಸ್ತು ಮತ್ತು‌ಮೌಲ್ಯ ಕಲಿಸುತ್ತದೆ. ದಸರಾ ಯಶಸ್ವಿಯಾಗಿ ನಡೆಯಲು ಸ್ವಚ್ಛತೆ ಮತ್ತು ಶ್ರದ್ಧೆ ಮುಖ್ಯ ಎಂದರು.

ಸ್ಚಚ್ಛತೆ ದೇಶದಲ್ಲಿ ಬಹಳ ಸವಾಲಾಗಿದೆ. ದಸರಾ ಹೊರಗೆ ಮಾತ್ರ ಆಚರಣೆಯಾಗಬಾರದು ನಮ್ಮ ಒಳಗೂ ವಿಕಾಸವಾಗಬೇಕು. ಸತ್ಯ ಪ್ರಾಮಾಣಿಕತೆ ಸೇವಾಭಾವ ಇದು ಮುಖ್ಯವಾಗಿದೆ. ನಮ್ಮ ದೇಶ ಮುಂದು ಹೋಗಲು ಆಶಿಸುತ್ತೇನೆ. ನಿಮ್ಮ ಕರ್ತವ್ಯವನ್ನ ಸರಿಯಾಗಿ ಮಾಡಿ ಆಗ ದೇಶ ಸರಿಯಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಪಾಲಿಕೆ ಅಯುಕ್ತ ಮಾಯಣ್ಣಗೌಡ ಮಾಜಿ ಕಾರಗಪರೇಟರ್ ಹೆಚ್ ಸಿ ಯೋಗೀಶ್, ಜ್ಞಾನೇಶ್ವರ್, ಯಮುನಾ ರಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು. 

Dasara means the victory of justice over injustice-Baggavalli Somashekar Raju

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close