ad

ಮನೆಯ ಕಿಟಕಿ ಮುರಿದು ಕಳುವಿಗೆ ಯತ್ನ-Attempted robbery by breaking a house window

 SUDDILIVE || SHIVAMOGGA

ಮನೆಯ ಕಿಟಕಿ ಮುರಿದು ಕಳುವಿಗೆ ಯತ್ನ-Attempted robbery by breaking a house window

Robbery, Aattempt


ಮನೆಯ ಕಿಟಕಿ ಮುರಿದು, ಗೋದ್ರೆಜ್ ಬೀರು ಮುರಿದು ಕಳ್ಳತನದ ಯತ್ನ ನಡೆಸಿದ ಘಟನೆ ವರದಿಯಾಗಿದ್ದು ಈ ಘಟನೆಯನ್ನ ಚೆಡ್ಡಿಗ್ಯಾಂಗ್ ನಡೆಸಿರುವ ಶಂಕೆ ವ್ಯಕ್ತವಾಗಿದೆ. 

ವಿದ್ಯಾನಗರದ ಸುಭಾಷ್ ನಗರದ 5 ನೇ ತಿರುವಿನಲ್ಲಿರುವ ಚಾನೆಲ್ ರಸ್ತೆಯ ಮನೆಯಲ್ಲಿ ಇಂದು ಬೆಳಗಿನ ಜಾವ 2-36 ರ ಸಮಯದಲ್ಲಿ ತ್ರಿಫೊರ್ಸ್ ನಲ್ಲಿದ್ದ ವ್ಯಕ್ತಿಗಳು ಮನೆಯಲ್ಲಿ ವಾಸವಿರುವಾಗಲೇ ಮನೆಯ ಮುಂದಿನ ಕಿಟಕಿಯನ್ನ ಮುರಿದು ಮನೆಗೆ ನುಗ್ಗಿದ್ದಾರೆ. ಸುಮಾರು 1 ಗಂಟೆಯವರೆಗೆ ರಾಬರಿಗೆ ಹುಡುಕಾಡಿದ್ದಾರೆ. ನಂತರ ಬೆಳಗ್ಗಿನ ಜಾವ  3-56 ರ ಸಮಯದಲ್ಲಿ ಏನೂ ಸಿಗದ ಹಿನ್ನಲೆಯಲ್ಲಿ  ಎಕ್ಸಿಟ್ ಆಗಿದ್ದಾರೆ.  

ಚಾನೆಲ್ ರಸ್ತೆಯಲ್ಲಿರುವ ಬಾಬಣ್ಣ ಎಂಬುವರ ಮನೆಗೆ ನುಗ್ಗಿರುವ ಈ ಗ್ಯಾಂಗ್ ರಾಬರಿಯ ಹಾವಳಿಯಿಟ್ಟು ಹೊಗಿದೆ. ಬಾಬಣ್ಣ ಸೇರಿ ಮೂವರು ಮನೆಯಲ್ಲೇ ಇದ್ದರೂ ಇದು ಯಾವುದು ಅವರ ಗಮನಕ್ಕೆ ಬಂದಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಎಂದಿನಂತೆ  ಬೆಳಿಗ್ಗೆ 4-30ಕ್ಕೆ ಬಾಬಣ್ಣನವರಿಗೆ ಎಚ್ಚರಿಕೆಯಾಗಿದೆ. ಮನೆಯ ಲ್ಯಾಚೆಸ್ ಒಪನ್ ಮಾಡಿ ನೋಡಿದಾಗ ಬಾಗಿಲು ಒಡೆದಿರುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ನಂತರ ಒಂದೊಂದೆ ಗೋಚರವಾಗುತ್ತಿದ್ದಂತೆ ಬಾಬಣ್ಣನವರಿಗೆ ಶಾಕ್ ಆಗಿದೆ.

Robbery, attempt

ಸ್ಥಳಕ್ಕೆ ಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಎದುರು ಮನೆಯಲ್ಲಿರುವ ಸಿಸಿ ಟಿವಿಯನ್ನೂ ಪರಿಶೀಲಿಸಿದ್ದಾರೆ. ಬಾಬಾಣ್ಣನವರಿಗೆ ಇದು ಹೊಸದಲ್ಲ. ಸುಮಾರು ಏಳೆಂಟು ವರ್ಷದ ಹಿಂದೆ ಹೀಗೆ ಅವರ ಮನೆಯಿಂದ ಬೈಕ್ ಕಳುವು ಮಾಡುವ ಪ್ರಯತ್ನ ನಡೆದಿತ್ತು. ಬಹಳ ವರ್ಷದಿಂದ ಇದು ಎರಡನೇ ವಿಫಲಯತ್ನವಾಗಿದೆ. ಬಾಬಣ್ಣ ಮೂರು ಕ್ಯಾಂಟರ್ ನ ಮಾಲೀಕರಾಗಿದ್ದಾರೆ. 

Attempted robbery by breaking a house window

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close