SUDDILIVE || SAGARA
ಸಾಗರದಲ್ಲಿ ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ-Stray dog attacks three-year-old child in Sagara
ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಯ ದಾಳಿಯಿಂದ ಮೂರು ವರ್ಷದ ಮಗುವಿಗೆ ತೀವ್ರಗಾಯ ಮತ್ತು ಆಘಾತವಾಗಿದೆ.
ಮನೆಯ ಮುಂಭಾಗದಲ್ಲಿ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿದ ಪರಿಣಾಮ ಬಾಲಕನ ಕಣ್ಣು ಮುಖ ಸೇರಿದಂತೆ ಅನೇಕ ಭಾಗಗಳಲ್ಲಿ ಗಾಯಗೊಳಿಸಿದೆ. ನಗರಸಭೆ ವ್ಯಾಪ್ತಿಯ ಜನ್ನತ್ ನಗರದ ನಿವಾಸಿ ರಶೀದ್ ಎಂಬವರ ಮೂರು ವರ್ಷದ ಮಗನ ಮೇಲೆ ದಾಳಿ ನಡೆಸಿದೆ.
ಬಾಲಕನಿಗೆ ದಾಳಿ ನಡೆಸಿದ ನಂತರ ಮಹಿಳೆಯ ಮೇಲೆಯೂ ಕೂಡ ದಾಳಿ ನಡೆಸಿದೆ. ಈ ಬಗ್ಗೆ ಸಾಗರ ನಗರ ಸಭೆಯ ಆಡಳಿತ ಹಾಗೂ ಸ್ಥಳೀಯ ಸದಸ್ಯರ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಬಾಲಕನಿಗೆ ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
Stray dog attacks three-year-old child in Sagara