ದಂಡ ಕಟ್ಟಲು ಮುಗಿ ಬಿದ್ದ ಜನ - people stand que for paying fine

 SUDDILIVE || SHIVAMOGGA

ದಂಡ ಕಟ್ಟಲು ಮುಗಿ ಬಿದ್ದ ಜನ - people stand que for paying fine



50% ಡಿಸ್ಕೌಂಟ್ ನಲ್ಲಿ ಟ್ರಾಫಿಕ್ ದಂಡ ಕಟ್ಟಲು ಇಂದು ಕಡೆಯ ದಿನವಾಗಿದ್ದು, ಸೆ.11 ರವರೆಗೆ  ಒಟ್ಟು ಜಿಲ್ಲೆಯಲ್ಲಿ 1,58,51,750 ರೂ. ದಂಡ ಸಂಗ್ರಹವಾಗಿದೆ. ಕೊನೆಯ ದಿನವೊಂದೇ ಜನ ದಂಡ ಕಟ್ಟಲು ಮುಗಿಬಿದ್ದ ಚಿತ್ರಣಗಳು ಲಭ್ಯವಾಗಿದೆ. ಒಂದೇ ದಿನ 50 ಲಕ್ಷಕ್ಕೂ ಹೆಚ್ಚು ಹಣ ಲಭ್ಯವಾಗಿದೆ.  ಒಟ್ಟು 2 ಕೋಟಿ 9 ಲಕ್ಷದ 38 ಸಾವಿರ ರೂ. ಹಣ ಸಂಗ್ರಹವಾಗಿದೆ. 

ಈ ಅಂಕಿ ಅಂಶ ಆ.23 ರಿಂದ ಆರಂಭಗೊಂಡ ಸಂಗ್ರಹ ಮೊದಲನೆ ದಿನ ಶೂನ್ಯ ಸಂಗ್ರಹವಾಗಿತ್ತು. ಆ.24 ರಂದು  ಇ-ಚಲನ್ ಸಂಗ್ರಹದಲ್ಲಿ 66 ಪ್ರಕರಣದ ಹಣ ಸಂಗ್ರಹವಾಗಿ 25,250 ರೂ, ಆ.25 ರಂದು 1068 ಪ್ರಕರಣಗಳಲ್ಲಿ 44,7750 ರೂ.

ಆ.26 ರಂದು 2072 ಪ್ರಕರಣಗಳಿಂದ 8,38,000 ರೂ. ಆ.27 ರಂದು 614 ಪ್ರಕರಣಗಳಿಂದ 2,62,500 ರೂ. ಆ.28 ರಂದು 1975 ಪ್ರಕರಣಗಳಿಂದ 809250 ರೂ. ಆ.29 ರಂದು 2226 ಪ್ರಕರಗಳಿಂದ 9,44,000 ರೂ. ಆ.30 ರಂದು 2591 ಪ್ರಕರಣಗಳಿಂದ 10,39,000 ರೂ. ಆ.31 ರಂದು 1030 ಪ್ರಕರಣಗಳಲ್ಲಿ 4,16,500 ರೂ. 


ಸೆ.1 ರಂದು 2136 ಪ್ರಕರಣಗಳಲ್ಲಿ 855500 ರೂ. ಸೆ.2 ಕ್ಕೆ 1687 ಪ್ರಕರಣಗಳಲ್ಲಿ 685000 ರೂ. ಸೆ.3 ರಂದು 1833 ಪ್ರಕರಗಳಿಂದ 766600, ಸೆ.4 ರಂದು 1924 ಪ್ರಕರಣಗಳಿಂದ 787250 ರೂ. ಸೆ.5 ರಿಂದ 934 ಪ್ರಕರಣಗಳಿಂದ 3,95250 ರೂ. ಸೆ.6 ರಂದು 299 ಪ್ರಕರಣಗಳಿಂದ 1,27,750 ರೂ. ಸೆ.7 ಕ್ಕೆ 676 ಪ್ರಕರಣಗಳಿಂದ 2,76,750 ರೂ. ಸೆ.8 ಕ್ಕೆ 2106 ಪ್ರಕರಣಗಳಲ್ಲಿ 8,55,750 ರೂ. ಸೆ.9 ಕ್ಕೆ 3556 ಪ್ರಕರಣಗಳಿಂದ 14,64,750 ರೂ. ಸೆ.10 ಕ್ಕೆ 4462 ಪ್ರಕರಣಗಳಿಂದ 18,60,250 ರೂ. ಸೆ.11 ಕ್ಕೆ 7183 ಪ್ರಕರಣಗಳಿಂದ 29,95,250 ರೂ. ಸಂಗ್ರಹವಾಗಿತ್ತು. ನಿನ್ನೆ ಕೊನೆಯ ದಿನಾಂಕವಾದುದರಿಂದ ದಂಡಕಟ್ಟಲು ಜನ ಮುಗಿಬಿದ್ದಿದ್ದರು. ನಿನ್ನೆ ರಾತ್ರಿಯ ವರೆಗೂ ದಂಡ ಸಂಗ್ರಹ ಮುಂದುವರೆದಿದ್ದು ನಿನ್ನೆ ಒಂದೇ ದಿನ 11,918 ಪ್ರಕರಣಗಳಿಂದ 50,44,250 ರೂ ದಂಡ ಪಾವತಿಯಾಗಿದೆ.


 

20 ದಿನಗಳಲ್ಲಿ ಒಟ್ಟು 50, 451 ಪ್ರಕರಣಗಳು ದಾಖಲಾಗಿದ್ದು ಒಟ್ಟು 2,09,38,750 ರೂ ಹಣ ಸಂಗ್ರಹವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

people stand que for paying fine



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close