SUDDILIVE || SHIVAMOGGA
ಆನೆಗಳ ತಾಲೀಮು ಆರಂಭ-Elephant training begins
ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಮೂರು ಆನೆಗಳಿಗೆ ನಗರದಲ್ಲಿ ತಾಲೀಮು ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಇವತ್ತು ಆನೆಗಳಿಗೆ ತಾಲೀಮು ನಡೆಸಲಾಯಿತು.
ಅಂಬಾರಿ ಹೊರಲಿರುವ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ನಗರದಲ್ಲಿ ತಾಲೀಮು ನಡೆಸಿದವು. ವಾಸವಿ ಶಾಲೆ ಆವರಣದಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಗೆ ಸಾಗಿದವು.
ಫ್ರೀಡಂ ಪಾರ್ಕ್ ನಿಂದ ಲಕ್ಷ್ಮೀ ಚಲನಚಿತ್ರ ಮಂದಿರ, ನಿರ್ಲಮ ಆಸ್ಪತ್ರೆ, ಉಷಾ ನರ್ಸಿಂಗ್ ಹೋಂ, ಸವಳಂಗ ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಗೋಪಿ ರಸ್ತೆ ಎಎ ವೃತ್ತ, ಗಾಂಧಿ ಬಜಾರ್ ಮೂಲಕ ಕೋಎ ವಾಸವಿ ಶಾಲೆಗೆ ತಲುಪಲಿದೆ. ಆನೆಯ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ವಾಹನ ಚಲಿಸಿದರೆ ಅದರ ಹಿಂದೆ ಸಾಗರ, ಬಹದ್ದೂರು ಮತ್ತು ಬಾಲಣ್ಣ ಸಾಲಿನಲ್ಲಿ ಸಾಗುತ್ತಿದ್ದಾರೆ.
ಬಾಲಕರ ಬಳಕೆ?
ದಸರಾ ಹಬ್ಬದಲ್ಲಿ ಸಣ್ಣ ಬಾಲಕರ ಬಳಕೆಯಾಗುತ್ತಿದೆ. ಈ ಬಾಲಕರು ಯಾರು ಏನು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಆನೆಗಳ ಜೊತೆ ಈ ಪುಟ್ಟ ಬಾಲಕರ ಬಳಕೆ ಎಷ್ಟರ ಮಟ್ಟಿಗೆ ಸರಿ ತಿಳಿಯಬೇಕಿದೆ. ಈ ಬಾಲಕರ ಬಳಕೆ ಬಾಲಕಾರ್ಮಿಕರ ಕಾಯ್ದೆ ಅಡಿ ಬರುವುದಿಲ್ಲವೇ? ಕೇವಲ ಹೋಟೆಲ್ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಬಳಕೆಯಾದರೆ ಮಾತ್ರ ಬಾಲಕಾರ್ಮಿಕ ಕಾಯ್ದೆ ಅಡ್ಡಿ ಆಗುತ್ತದಾ?
Elephant training begins